ಪೊಲೀಸ್ ಪತ್ನಿಯ ಜೊತೆ ಹೆಡ್ ಕಾನ್ಸಟೇಬಲ್ ಆತ್ಮಹತ್ಯೆ- ಖಾಕಿ ದುಃಖ
ಹುಬ್ಬಳ್ಳಿ: ಕೋಲಾರ ಮೂಲದ ಡಿವೈಎಸ್ಪಿ ಆತ್ಮಹತ್ಯೆ ನಡೆದು ಒಂದೇ ದಿನ ಆಗಿಲ್ಲ ಅಷ್ಟರಲ್ಲೇ ಕೋಲಾರ ಮೂಲದ ಹೆಡ್ ಕಾನ್ಸಟೇಬಲ್ ತನ್ನ ಪತ್ನಿಯೊಂದಿಗೆ ಆತ್ಮಹತ್ಯೆ ಮಾಡಿಕೊಂಡ ಕೊತ್ತನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕೋಲಾರ ಮೂಲದ ಹೆಡ್ ಕಾನ್ಸಟೇಬಲ್ ಸುರೇಶ ಹಾಗೂ ಚಿಕ್ಕಮಂಗಳೂರು ಮೂಲದ ಕಾನ್ಸಟೇಬಲ್ ಶೀಲಾ ಹತ್ತು ವರ್ಷದ ಹಿಂದೆ ಮದುವೆಯಾಗಿ ಜೀವನ ನಡೆಸುತ್ತಿದ್ದರು. ಆದರಿಂದೂ ಇಬ್ಬರು ಆತ್ಮಹತ್ಯೆ ಮಾಡಿಕೊಂಡು ಸಾವಿಗೀಡಾಗಿದ್ದಾರೆ.
ಸಂಪಿಗೆಹಳ್ಳಿ ಉಪವಿಭಾಗದಲ್ಲಿ ರೈಟರ್ ಆಗಿದ್ದ ಸುರೇಶ ಕಂಟ್ರೋಲ್ ರೂಂನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶೀಲಾ ಅವರೊಂದಿಗೆ ವಿವಾಹವಾಗಿ ಚೆನ್ನಾಗಿಯೇ ಜೀವನ ನಡೆಸುತ್ತಿದ್ದರು. ಆದರೆ, ಅವರಿಬ್ಬರು ಯಾವ ಕಾರಣಕ್ಕೆ ಇಂತಹ ತೀರ್ಮಾನ ತೆಗೆದುಕೊಂಡರು ಎಂಬುದು ತಿಳಿದು ಬಂದಿಲ್ಲ.
ಪೊಲೀಸ್ ಇಲಾಖೆಯಲ್ಲಿ ಸಾವುಗಳು ನಿರಂತವಾಗಿ ನಡೆಯುತ್ತಿರುವುದಕ್ಕೆ ಕಾರಣವನ್ನ ಇಲಾಖೆ ಹುಡುಕಬೇಕಿದೆ. ಸಾಮಾನ್ಯ ಜನರಿಗೆ ಮಾದರಿಯಾಗಬೇಕಾದವರೇ ಹೀಗೆ ಆತ್ಮಹತ್ಯೆ ಮಾಡಿಕೊಂಡರೇ, ಜನರ ಮನಸ್ಥಿತಿಯ ಬಗ್ಗೆ ಚಿಂತನೆ ಮಾಡಬೇಕಾಗಿದೆ ಎನ್ನುವುದು ಪ್ರಜ್ಞಾವಂತರ ಮಾತು.