ನೀ ಏನ್ ಪೊಲೀಸ್ ಕೆಲ್ಸಾ ಮಾಡ್ತಿಲೇ… ಹೀಗಂದ ಮಾಜಿ ಶಾಸಕನ ವಿರುದ್ಧ ಕೇಸ್
1 min readಬಾಗಲಕೋಟೆ: ಡಿಸಿಸಿ ಬ್ಯಾಂಕ್ ಪಿಗ್ಮಿ ಏಜೆಂಟ್ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಲು ಬೆಂಬಲಿಗರಿಗೆ ನೊಟೀಸ್ ನೀಡಿದ್ದಕ್ಕೆ ಇಳಕಲ್ ಪೊಲೀಸ್ ಠಾಣೆಗೆ ನುಗ್ಗಿ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ, ಸಿಪಿಐಗೆ ಧಮಕಿ ಹಾಕಿದ ವೀಡಿಯೊ ವೈರಲ್ ಆಗಿದೆ.
ಘಟನೆಯ ಎಕ್ಸಕ್ಲೂಸಿವ್ ವೀಡಿಯೋ..
ಹೇ.. ಮಿಸ್ಟರ್ ಇವರಿಗೆ ಏನ್ ವಿಚಾರಣೆ ಮಾಡ್ತಿಯಾ..?
ಜಾಮೀನು ಪತ್ರ ತೆಗೆದುಕೊಂಡು ಕಳಿಸೋದು ಅಷ್ಟೇ ನಿನ್ನ ಕೆಲಸ..
ಅವರಿಗ್ಯಾಕೆ ನೊಟೀಸ್ ಕೊಡ್ತಿಯಾ .
ಯಾರೂ ನೊಟೀಸ್ ತಗೊಬ್ಯಾಡ್ರಿಲೆ..
ಹೇ ಮಗನೆ ಕಾನೂನು ಮಾಡುವವನು ನಾನು..
ನೀ ಏನು ಕಾನೂನಿನ ಬಗ್ಗೆ ಹೇಳ್ತಿಯಾ ಇವರ್ಯಾರು ಇನ್ನು ಮುಂದೆ ವಿಚಾರಣೆಗೆ ಬರೋದಿಲ್ಲ..
ನೀ ಏನ್ ಪೊಲೀಸ್ ಕೆಲಸ ಮಾಡ್ತಿಲೆ..
ನಿನ್ ಸಸ್ಪೆಂಡ್ ಮಾಡಿಸ್ತೀನಿ..
ಠಾಣೆ ಬಿಟ್ಟು ಹೊರಗೆ ಬಾ ನೋಡಿಕೊಳ್ತೀನಿ.. ಈ ಎಲ್ಲ ಅಣಿಮುತ್ತುಗಳು ಮಾಜಿ ಶಾಸಕರ ಬಾಯಿಯಿಂದಲೇ ಬಂದಿದ್ದವು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಗಲಕೋಟೆ ಜಿಲ್ಲೆ ಇಳಕಲ್ ನಗರ ಠಾಣೆಯಲ್ಲಿ ಡಿಸೆಂಬರ್ 17 ರಂದು ಘಟನೆ ನಡೆದಿತ್ತು. ವಿಜಯಾನಂದ ಕಾಶಪ್ಪನವರ, ಹುನಗುಂದ ಸಿಪಿಐ ಜೊತೆ ವಾಗ್ವಾದ ಮಾಡಿದ್ದ ಪ್ರಕರಣಕ್ಕೆ ಸಿಪಿಐ ಅಯ್ಯನಗೌಡ ದೂರಿನ ಮೇರೆಗೆ ಎಫ್ ಐ ಆರ್ ದಾಖಲಾಗಿದೆ. ಕರ್ತವ್ಯಕ್ಕೆ ಅಡ್ಡಿ, ನಿಂದನೆ, ಧಮಕಿ ಹಿನ್ನೆಲೆ ಕೇಸ್. ಕಲಂ143,147,353,504,506 ಅಡಿಯಲ್ಲಿ ಕೇಸ್