ಹುಬ್ಬಳ್ಳಿಯಲ್ಲಿ ಬೆಳ್ಳಂಬೆಳಿಗ್ಗೆ ಪ್ರೇಮಿಗೆ ತಲ್ವಾರ ಹಾಕಿದ ಯುವಕ

ಹುಬ್ಬಳ್ಳಿ: ನಗರದ ಜನನಿಬೀಡ ಪ್ರದೇಶದಲ್ಲಿಯೇ ಯುವತಿಗೆ ತಲ್ವಾರ ಹಾಕಿ ಕೊಲೆ ಮಾಡಲು ಯತ್ನಿಸಿದ ಘಟನೆ ನಡೆದಿದ್ದು, ಗಂಭೀರವಾಗಿ ಗಾಯಗೊಂಡಿರುವ ಯುವತಿಯನ್ನ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಎಕ್ಸಕ್ಲೂಸಿವ್ ವೀಡಿಯೋ..
https://www.youtube.com/watch?v=DLoyu1Fun-w
ನಗರದ ದೇಶಪಾಂಡೆನಗರದಲ್ಲಿ ಘಟನೆ ನಡೆದಿದ್ದು ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ. ಯುವತಿ ನಡೆದುಕೊಂಡು ಹೋಗುತ್ತಿದ್ದ ಸಮಯದಲ್ಲಿ ಮಾಸ್ಕ ಹಾಕಿಕೊಂಡು ಬಂದ ಯುವಕನೋರ್ವ ಕೈಯಲ್ಲಿದ್ದ ತಲ್ವಾರನಿಂದ ಹಲವು ಬಾರಿ ಹೊಡೆದ ಬೆನ್ನಲ್ಲೇ ಆಕೆ ಗಂಭೀರವಾಗಿ ಗಾಯಗೊಂಡಿದ್ದಾಳೆ.
ಪ್ರೀತಿಸುತ್ತಿದ್ದ ಕಾರಣದಿಂದಲೇ ಹುಡುಗಿಯ ಮೇಲಿನ ದ್ವೇಷದಿಂದ ಹೀಗೆ ಮಾಡಿದ್ದಾನೆಂದು ಹೇಳಲಾಗಿದ್ದು, ಆರೋಪಿಯನ್ನ ಉಪನಗರ ಠಾಣೆ ಪೊಲೀಸರು ಬಂಧನ ಮಾಡಿದ್ದಾರೆ. ಆತನ ಹಿನ್ನೆಲೆಯನ್ನ ತಿಳಿದುಕೊಳ್ಳುತ್ತಿದ್ದಾರೆ.
ಘಟನೆಯ ನೋಡುತ್ತಿದ್ದ ಹಲವರು ಆತಂಕದಿಂದ ದೂರ ಓಡಿ ಹೋಗಿದ್ದು, ಕೆಲವರು ದೂರದಿಂದ ವೀಡಿಯೋ ಮಾಡಿಕೊಂಡಿದ್ದಾರೆ.