ಎಸಿಪಿ ಹೊಸಮನಿ ಹಲ್ಲೆ ಪ್ರಕರಣ: ಅದಕ್ಕೇಲ್ಲ ಕಾರಣವಾಗಿದ್ದು ಇನ್ಸಪೆಕ್ಟರ್ ಹೋತಪೇಟೆ.. ಹೀಗೆ ಹೇಳಿದ್ದು ಯಾರೂ ಗೊತ್ತಾ..!
ಹುಬ್ಬಳ್ಳಿ: ದಕ್ಷಿಣ ಸಂಚಾರಿ ಠಾಣೆಯಲ್ಲಿ ಕಾನ್ಸಟೇಬಲ್ ಮೇಲೆ ಎಸಿಪಿ ಮಾಡಿರುವ ಹಲ್ಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಎಲ್ಲವಕ್ಕೂ ಕಾರಣವಾಗಿದ್ದು ದಕ್ಷಿಣ ಸಂಚಾರಿ ಠಾಣೆಯ ಇನ್ಸಪೆಕ್ಟರ್ ಮಹಾಂತೇಶ ಹೋತಪೇಟೆ ಅವರೇ ಕಾರಣ..
ಹೌದು.. ಹೀಗೆ ಹೇಳಿದ್ದು ಬೇರಾರೂ ಅಲ್ಲ, ಸ್ವತಃ ಎಸಿಪಿ ಹೊಸಮನಿ. ಘಟನೆಯ ಬಗ್ಗೆ ಮಾತನಾಡಿರುವ ಹೊಸಮನಿಯವರು, ಪೊಲೀಸ್ ಡ್ಯೂಟಿ ಮಾಡದೇ ಇದ್ದರೂ ಅವರ ಪರವಾಗಿಯೇ ಇನ್ಸಪೆಕ್ಟರ್ ಮಾಡುತ್ತಿದ್ದಾರೆ. ಹಾಗಾಗಿಯೇ ಈ ವಿಷಯವನ್ನ ಹೀಗೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ವಿಸ್ತಾರವಾಗಿ ಮಾತನಾಡಿರುವ ಹಲವು ವಿಷಯಗಳು ಬಹಿರಂಗ ಮಾಡಿದ್ದಾರೆ. ಈಗಾಗಲೇ ಈ ಘಟನೆಯನ್ನ ಗಂಭೀರವಾಗಿ ತೆಗೆದುಕೊಂಡಿರುವ ಹುಬ್ಬಳ್ಳಿ-ಧಾರವಾಡ ಪೊಲೀಸ್ ಕಮೀಷನರ್ ಲಾಬುರಾಮ್, ಡಿಸಿಪಿ ಮೂಲಕ ತನಿಖೆಯನ್ನ ಮಾಡಿಸುತ್ತಿದ್ದಾರೆ.
ಹಲ್ಲೆ ಮಾಡಿರುವ ಎಸಿಪಿ, ಎಸಿಪಿಯವರು ಆರೋಪ ಮಾಡುತ್ತಿರುವ ಇನ್ಸಪೆಕ್ಟರ್ ಇವೆಲ್ಲದರ ಹಿಂದೆ ಇರುವ ನಿಜವಾದ ಲಾಭಿ ಏನು ಎಂಬುದನ್ನ ಹಿರಿಯ ಅಧಿಕಾರಿಗಳು ಅರಿತುಕೊಳ್ಳುತ್ತಾರಾ ಎಂಬುದನ್ನ ಕಾದು ನೋಡಬೇಕಿದೆ.


