ಧಾರವಾಡ-71, ಹು-ಧಾ-74ದಲ್ಲಿ ಸದ್ದಿಲ್ಲದೇ ನಡೆಯುತ್ತಿದೆ ಎಐಎಂಐಎಂ ಪಕ್ಷ ಸಂಘಟನೆ
1 min readಧಾರವಾಡ: ರಾಜ್ಯದಲ್ಲಿ ಇನ್ನೆರಡು ವರ್ಷದಲ್ಲಿ ವಿಧಾನಸಭಾ ಚುನಾವಣೆಗಳು ನಡೆಯುವ ಸಾಧ್ಯತೆಯಿದ್ದು, ಅದೇ ಕಾರಣಕ್ಕೆ ಎಂಐಎಂ ಪಕ್ಷ ಸದ್ದಿಲ್ಲದೇ ಧಾರವಾಡ ಜಿಲ್ಲೆಯಲ್ಲಿನ ಎಲ್ಲ ಕ್ಷೇತ್ರಗಳಲ್ಲಿಯೂ ಸದ್ದಿಲ್ಲದೇ ಸಂಘಟನೆಯನ್ನ ಮಾಡುತ್ತಿದ್ದು, ಅದರಲ್ಲಿಯೇ ಧಾರವಾಡ ಗ್ರಾಮೀಣ ಮತ್ತೂ ಧಾರವಾಡ ಪಶ್ಚಿಮ ಕ್ಷೇತ್ರದಲ್ಲಿ ಹೆಚ್ಚು ಒಲವು ತೋರಿಸುತ್ತಿದೆ.
ಧಾರವಾಡ-71 ಕ್ಷೇತ್ರದಲ್ಲಿ ಎಐಎಂಐಎಂ ಶಾಸಕ ಸ್ಥಾನದ ಅಭ್ಯರ್ಥಿಗಾಗಿ ಹುಡುಕಾಟ ಆರಂಭಿಸಿದೆ. ಹಲವು ದಿನಗಳಿಂದ ತೆರೆಮರೆಯಲ್ಲಿ ಹಲವರ ಜೊತೆ ಮಾತುಕತೆಯನ್ನೂ ಪಕ್ಷ ನಡೆಸುತ್ತಿದೆ. ಈಗಾಗಲೇ ಕೆಲವು ಪ್ರಮುಖರೊಂದಿಗೆ ಸಂಪರ್ಕವನ್ನೂ ಹೊಂದಿದೆ ಎನ್ನುತ್ತಿವೆ ಮೂಲಗಳು.
ಧಾರವಾಡ-71 ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಭಾರತೀಯ ಜನತಾ ಪಕ್ಷದಿಂದ ಲಿಂಗಾಯತ ಅಭ್ಯರ್ಥಿಗಳೇ ಇರುವುದು ನಿಶ್ಚಿತವಾಗಿದ್ದು, ಅದಕ್ಕೆ ವ್ಯತಿರಿಕ್ತವಾದ ಮುಸ್ಲಿಂ ಬಣದಿಂದ ಅಭ್ಯರ್ಥಿಯನ್ನ ಕಣಕ್ಕೆ ಇಳಿಸಲು ಎಐಎಂಐಎಂ ಮುಂದಾಗಿದೆ ಎಂದು ಹೇಳಲಾಗುತ್ತಿದೆ. ಅಷ್ಟೇ ಅಲ್ಲ, ಅಹಿಂದ ಮತಗಳನ್ನ ಸೇರಿಸಿ ಮುಸ್ಲಿಂ ಅಭ್ಯರ್ಥಿಯನ್ನ ಕಣಕ್ಕೆ ಇಳಿಸಲು ಸರ್ವಸನ್ನದ್ಧವಾಗಿದೆ.
ಕಾಂಗ್ರೆಸ್ ಪಕ್ಷದಲ್ಲಿ ಬೇಸರಗೊಂಡ ಹಲವರು ಎಐಎಂಐಎಂದೊಂದಿಗೆ ಕೈ ಜೋಡಿಸತೊಡಗಿದ್ದಾರೆ. ಕೆಲವರು ಬಿಜೆಪಿಗೆ ಸಪೋರ್ಟ್ ಮಾಡುತ್ತ ಬಂದವರನ್ನ ಪಕ್ಷ ತನ್ನತ್ತ ಸೆಳೆದುಕೊಳ್ಳುತ್ತ ಮುನ್ನಡೆದಿದೆ. ಇದು ಮುಂದಿನ ದಿನಗಳಲ್ಲಿ ಎರಡು ರಾಷ್ಟ್ರೀಯ ಪಕ್ಷಗಳಿಗೆ ಮಾರಕವಾಗುವ ಲಕ್ಷಣಗಳು ಕಂಡು ಬರುತ್ತಿವೆ ಎನ್ನುತ್ತಿದ್ದಾರೆ ರಾಜಕೀಯ ಪಂಡಿತರು.