ನೀವೂ ಮನೆಯಲ್ಲಿ ಕುಟುಂಬದೊಂದಿಗೆ ಹಾಯಾಗಿ ಇದ್ದೀರಲ್ವಾ- ನಿಮಗಾಗಿ ಇವರು ಬೀದಿಯಲ್ಲಿ ಖುಷಿ ಪಡ್ತಿದ್ದಾರೆ: ಸೆಲ್ಯೂಟ್ ಪೊಲೀಸ್
1 min readಸಂಚಾರಿ ಠಾಣೆಯ ಇನ್ಸಪೆಕ್ಟರ್ ಕಾಡದೇವರಮಠ ಕೂಡಾ ಸಿಬ್ಬಂದಿಗಳೊಂದಿಗೆ ಕೇಕ್ ಕತ್ತರಿಸಿ ಹೊಸ ವರ್ಷವನ್ನ ಬರಮಾಡಿಕೊಂಡು, ಸಿಬ್ಬಂದಿಗಳಲ್ಲಿ ಸಂತಸ ಮೂಡಿಸಿದರು.
ಹುಬ್ಬಳ್ಳಿ: ಹೊಸ ವರ್ಷದ ಸಂಭ್ರಮದಲ್ಲಿರುವ ಎಲ್ಲರೂ ಕುಟುಂಬದೊಂದಿಗೆ ಅರಾಮಾಗಿ ಮನೆಯಲ್ಲಿ ಎಲ್ಲರೊಂದಿಗೆ ಖುಷಿಯನ್ನ ಹಂಚಿಕೊಳ್ಳುತ್ತಿದ್ದರೇ, ನಿಮ್ಮೆಲ್ಲರ ನೆಮ್ಮದಿಗಾಗಿ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರು ಸೇರಿದಂತೆ ಎಲ್ಲರೂ ಚಳಿಯಲ್ಲೂ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ, ರಸ್ತೆಯಲ್ಲಿಯೇ ಕೇಕ್ ಕತ್ತರಿಸಿ ತಮ್ಮ ತಮ್ಮಲ್ಲೇ ಹೊಸ ವರ್ಷದ ಶುಭಾಶಯಗಳನ್ನ ವಿನಿಮಯ ಮಾಡಿಕೊಳ್ಳುತ್ತಿದ್ದಾರೆ.
ಹುಬ್ಬಳ್ಳಿ-ಧಾರವಾಡದಲ್ಲಿ ಹೊಸ ವರ್ಷಾಚರಣೆಯ ಸಂಭ್ರಮವಿಲ್ಲವಾದರೂ, ಪೊಲೀಸರು ಕರ್ತವ್ಯ ನಿರ್ವಹಿಸಲೇಬೇಕಾಗಿದೆ. ಈಗ ಈ ವರದಿ ಮಾಡುವ ಕೆಲವೇ ನಿಮಿಷಗಳ ಹಿಂದಷ್ಟೇ ಪೊಲೀಸ್ ಕಮೀಷನರ್ ಲಾಬುರಾಮ್ ಅವರು, ಇನ್ನೂ ಸಿಟಿ ರೌಂಡ್ಸ್ ಮಾಡ್ತಾಯಿದ್ದಾರೆ. ಡಿಸಿಪಿ ರಾಮರಾಜನ್ ಕೂಡಾ, ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ. ಯಾವೊಬ್ಬ ಪೊಲೀಸ್ ಅಧಿಕಾರಿಯೂ ಮನೆಯಲ್ಲಿ ಕುಟುಂಬದೊಂದಿಗೆ ಹೊಸ ವರ್ಷದ ಸಂಭ್ರಮವನ್ನ ಆಚರಣೆ ಮಾಡುತ್ತಿಲ್ಲ.
ವಿಜಯಪುರದಿಂದ ಬಂದಿರುವ ಐಆರ್ ಬಿ ಪೊಲೀಸರು ಕಿತ್ತೂರು ಚೆನ್ನಮ್ಮ ವೃತ್ತದ ಹತ್ತಿರ ಕೇಕ್ ಕತ್ತರಿಸಿ ಹೊಸ ವರ್ಷವನ್ನ ಆಚರಣೆ ಮಾಡಿದ್ರು. ತಾವೂ ಕುಟುಂಬದೊಂದಿಗೆ ಇಲ್ಲವೆಂದರೂ, ಸಹೋದ್ಯೋಗಿಗಳನ್ನೇ ಕುಟುಂಬದಂತೆ ಕಂಡು ಕೇಕ್ ನ್ನ ತಿನಿಸುವ ದೃಶ್ಯ ಪೊಲೀಸರ ಸ್ಥಿತಿಯನ್ನ ತೋರಿವಂತಿತ್ತು.
ಅವರಿಗಲೂ ಚಳಿಯಲ್ಲಿ ನಿಂತು ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ. ಕೊರೋನಾ ಸಮಯದಲ್ಲೂ, ಹೊಸ ವರ್ಷದ ಸಂಭ್ರಮದಲ್ಲೂ ಅವರಿಗೆ ಇರೋದೆ ನಮ್ಮೇಲ್ಲರ ನೆಮ್ಮದಿಯ ಚಿಂತೆ.. ಹ್ಯಾಟ್ಸ್ ಆಫ್ ಪೊಲೀಸ್.. ನಿಮಗೆ ಹೊಸ ವರ್ಷದ ಶುಭಾಶಯಗಳು..