ನುಗ್ಗಿಕೇರಿ ಬಳಿ “ಝೈಲೋ” ಪಲ್ಟಿ- ಜೀಯೋ ನೌಕರ ದುರ್ಮರಣ

ಧಾರವಾಡ: ಎಲ್ಲರೂ ನೂತನ ವರ್ಷದ ಸಂಭ್ರಮಾಚರಣೆಯಲ್ಲಿ ಮುಳುಗಿದ ಸಮಯದಲ್ಲಿ ಹುಬ್ಬಳ್ಳಿಯಿಂದ ಧಾರವಾಡಕ್ಕೆ ಬರುತ್ತಿದ್ದ ಮಹೀಂದ್ರಾ ಝೈಲೋ ವಾಹನ ಧಾರವಾಡ ತಾಲೂಕಿನ ನುಗ್ಗಿಕೇರಿ ಗ್ರಾಮದ ಬಳಿ ಪಲ್ಟಿಯಾಗಿದ್ದು, ಜೀಯೋ ಕಂಪನಿಯ ನೌಕರ ಸಾವಿಗೀಡಾದ ಘಟನೆ ಸಂಭವಿಸಿದೆ.
ಮೂಲತಃ ಕುಂದಗೋಳ ತಾಲೂಕಿನ ಮಂಡಿಗನಾಳ ಗ್ರಾಮದ 27 ವರ್ಷದ ಮಹೇಶ ಗದಗ ಎಂಬಾತನೇ ಸಾವಿಗೀಡಾಗಿದ್ದು, ವಾಹನದಲ್ಲಿದ್ದ ಇನ್ನೂ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಜೀಯೋ ಪೈಬರ್ ಆಪ್ಟಿಕಲ್ಸನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಹೇಶ, ಹುಬ್ಬಳ್ಳಿಯಲ್ಲಿಯೇ ವಾಸ ಮಾಡುತ್ತಿದ್ದು, ತಡರಾತ್ರಿ ಹುಬ್ಬಳ್ಳಿಯಿಂದ ಧಾರವಾಡದ ಕಡೆಗೆ ಸಹೋದ್ಯೋಗಿಗಳೊಂದಿಗೆ ಬರುತ್ತಿದ್ದಾಗ ದುರ್ಘಟನೆ ಸಂಭವಿಸಿದೆ.
ವಾಹನದ ಎಡಭಾಗದಲ್ಲಿ ಕುಳಿತಿದ್ದ ಮಹೇಶ, ಪಲ್ಟಿಯಾದ ತಕ್ಷಣವೇ ಕೆಳಗೆ ಬಿದ್ದು ಸಾವಿಗೀಡಾಗಿದ್ದಾರೆ. ಘಟನೆಯ ಬಗ್ಗೆ ಪ್ರಕರಣ ದಾಖಲು ಮಾಡಿಕೊಂಡಿರುವ ಧಾರವಾಡ ಸಂಚಾರಿ ಠಾಣೆ ಪೊಲೀಸರು, ಮುಂದಿನ ಕಾನೂನು ಕ್ರಮ ಕ್ರಮವನ್ನ ಜರುಗಿಸಿದ್ದಾರೆ.