ಶ್ವೇತಾ ಮ್ಯಾರೇಜ್ ಫಾಸ್ಟರ್ ರವಿ ಪ್ರಕರಣಕ್ಕೆ ಟ್ವಿಸ್ಟ್: ಚರ್ಚ ಫಾಸ್ಟರ್ ಅಂದರ್

ಬಳ್ಳಾರಿ: 22 ವರ್ಷದ ಯುವತಿಯನ್ನ 50 ವರ್ಷದ ಫಾಸ್ಟರೋರ್ವರು ಮದುವೆಯಾದ ಪ್ರಕರಣ ಜಿಲ್ಲೆಯಾಧ್ಯಂತ ಗದ್ದಲವನ್ನುಂಟು ಮಾಡಿದ್ದ ಪ್ರಕರಣಕ್ಕೆ ಹೊಸದೊಂದು ಟ್ವಿಸ್ಟ್ ಸಿಕ್ಕಿದ್ದು, ಮಹಿಳೆಯರಿಬ್ಬರ ದೂರಿನ ಹಿನ್ನೆಲೆಯಲ್ಲಿ ಪಾಸ್ಟರನನ್ನ ಪೊಲೀಸರು ಬಂಧಿಸಿದ್ದಾರೆ.
ಧರ್ಮ ಪ್ರಚಾರದ ಹೆಸರಲ್ಲಿ ಮಹಿಳೆಯರಿಗೆ ವಂಚನೆ ಹಾಗೂ ಮಹಿಳೆಗೆ ಲೈಂಗಿಕ ದೌರ್ಜನ್ಯ ಮಾಡಿದ ಹಿನ್ನೆಲೆಯಲ್ಲಿ ರವಿಕುಮಾರ್ ಅವರನ್ನು ಬಳ್ಳಾರಿ ಪೊಲೀಸರು ಬಂಧಿಸಿದ್ದಾರೆ. ಕಳೆದ ಒಂದು ವಾರದ ಹಿಂದ ಬಳ್ಳಾರಿಯ ಯುವತಿಯನ್ನು ಕಿಡ್ನ್ಯಾಪ್ ಮಾಡಿದ್ದಾರೆ ಎಂದು ಡಿಸೆಂಬರ್ 24 ರಂದು ಬಳ್ಳಾರಿ ಶ್ವೇತಾ ಎಂಬ ಯುವತಿಯ ಪಾಲಕರು ಬಳ್ಳಾರಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಆದ್ರೆ ಬಳಿಕ ಶ್ವೇತಾ ಸ್ವತಃ ನಾನೇ ರವಿ ಅವರ ಜೊತೆಯಲ್ಲಿ ಓಡಿ ಬಂದಿರುವೆ ಮೇಲಾಗಿ ನಾನು ಅವಳ ಜೊತೆಯಲ್ಲಿ ಮದುವೆ ಆಗಿರುವುದಾಗಿ ವಿಡಿಯೋ ಒಂದನ್ನು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಳು.
ಅದಾದ ಬಳಿಕ ಫಾಸ್ಟರ್ ರವಿ ಅವರ ಮೇಲೆ ಮತ್ತೆ ಇಬ್ಬರು ಯುವತಿಯರು ದೂರು ನೀಡಿದ್ದು ಒಬ್ಬರಿಂದ ಧರ್ಮದ ಹೆಸರಲ್ಲಿ ಸುಮಾರು ೯ ಲಕ್ಷ ಹಣ ದೋಚಿದ್ದ ಹಾಗೂ ಇನ್ನೊಬ್ಬ ಯುವತಿಯನ್ನು ಅತ್ಯಾಚಾರ ಮಾಡಿದ್ದಾರೆ ಎಂದು ದೂರು ದಾಖಲಾಗಿತ್ತು. ಇಬ್ಬರು ಮಹಿಳೆಯರು ಫಾಸ್ಟರ್ ವಿರುದ್ದ ವಂಚನೆ ಹಾಗೂ ಲೈಂಗಿಕ ಕಿರುಕುಳದ ದೂರು ದಾಖಲು ಮಾಡಿದ್ದರು. ಕಾರಣ ಮಹಿಳೆಯರ ದೂರು ಹಿನ್ನೆಲೆ ಫಾಸ್ಟರ್ ವಿರುದ್ದ ಎರಡು ಪ್ರತ್ಯೇಕ ಎಫ್ ಐ ಆರ್ ದಾಖಲಾಗಿತ್ತು.
ಎಫ್ಐಆರ್ ದಾಖಲಿಸಿದ ಬೆನ್ನಲ್ಲೇ ಫಾಸ್ಟರ್ ರವಿಕುಮಾರ್ ಹುಡುಕಾಟಕ್ಕೆ ಪೋಲೀಸರು ಬಲೆ ಬೀಸಿದ್ದರು. ಶ್ವೇತಾ ಎಂಬ ಹುಡುಗಿಯ ಜೊತೆಗಿನ ಸ್ನೇಹಿತರು ಮನೆಯಲ್ಲಿ ಅಡಗಿ ಕುಳಿತಿದ್ದ ಆರೋಪಿ ಫಾಸ್ಟರ್ ರವಿಯನ್ನು ಬೆಂಗಳೂರಿನಿಂದ ಬಂಧಿಸಿ ಬಳ್ಳಾರಿಗೆ ಕರೆತರಲಾಗಿತ್ತು. ಈ ಮದ್ಯ ಇಂದು ಕೋರ್ಟ್ ಗೆ ಹಾಜರು ಮಾಡುವ ಸಮಯದಲ್ಲಿ ಶ್ವೇತಾ ಮನೆಯವರು ಹಾಗೂ ಮಹಿಳಾ ಸಂಘಟನೆಯ ಕಲ ಮಹಿಳೆಯರು ರವಿ ಛೀಮಾರಿ ಹಾಕಿದ್ದಾರೆ. ಮಹಿಳೆ ಒಬ್ಬಳು ತನ್ನ ಕೈಯಲ್ಲಿ ಇದ್ದ ಮೊಬೈಲ್ ಒಗೆದು ತಮ್ಮ ಆಕ್ರೋಶ ಹೊರ ಹಾಕಿದ್ದಾರೆ. ಬಳಿಕ ಮಧ್ಯ ಪ್ರವೇಶ ಮಾಡಿದ ಪೊಲೀಸರು ರವಿಯನ್ನು ಕೋರ್ಟ್ ಮುಂದೆ ಹಾಜರು ಪಡಿಸಿದ್ದಾರೆ.