ಆಟೋ ಚಾಲನೆ ಮಾಡುತ್ತಿದ್ದಾಗಲೇ ಪಾರ್ಶ್ವವಾಯು: ಗೋಡೆಗೆ ಡಿಕ್ಕಿ, ಗಂಭೀರ ಗಾಯ

ಹುಬ್ಬಳ್ಳಿ: ಆನಂದನಗರದಿಂದ ಶಹರದತ್ತ ಆಟೋ ಚಲಾಯಿಸುತ್ತ ಬರುತ್ತಿದ್ದ ಚಾಲಕನಿಗೆ ಪಾರ್ಶ್ವವಾಯು ಆಗಿದ್ದು, ಆಟೋ ನಿಯಂತ್ರಣ ತಪ್ಪಿ ಮತ್ತಷ್ಟು ಗಾಯಗಳಾದ ಘಟನೆ ಆನಂದನಗರದಲ್ಲಿ ಸಂಭವಿಸಿದೆ.
ಆಟೋಚಾಲಕ ಶಂಭುಲಿಂಗ ಜಡಿ ಎಂಬಾತನಿಗೆ ಮೊದಲು ‘ಲಕ್ವಾ’ ಹೊಡೆದಿದೆ. ಆಗ ಚಲಾಯಿಸುತ್ತಿದ್ದ ಆಟೋ ನಿಯಂತ್ರಣ ತಪ್ಪಿ ಗೋಡೆಗೆ ಗುದ್ದಿದೆ. ಇದರಿಂದ ಶಂಭುಲಿಂಗ್ ಅವರಿಗೆ ಮತ್ತಷ್ಟು ಗಾಯಗಳಾಗಿದ್ದು, ತಕ್ಷಣವೇ ಅವರನ್ನ ಹುಬ್ಬಳ್ಳಿಯ ಕಿಮ್ಸಗೆ ರವಾನೆ ಮಾಡಲಾಗಿದೆ.
ಕೊರೋನಾ ಮಹಾಮಾರಿಯ ಹಾವಳಿ ಕಡಿಮೆಯಾದಾಗಿಂದ ಗ್ರಾಹಕರು ಆಟೋಗಳಲ್ಲಿ ಸಂಚಾರ ಹೆಚ್ಚು ಮಾಡಿದ್ದು, ಮಾಡಿರುವ ಸಾಲವನ್ನ ಕಳೆದುಕೊಳ್ಳಲು ನಿರಂತರವಾಗಿ ಶಂಭುಲಿಂಗ ಆಟೋ ಚಲಾಯಿಸುತ್ತಿದ್ದರು. ಆದರೆ, ಇಂದು ಇಂತಹ ಘಟನೆ ನಡೆದಿದ್ದರಿಂದ ಕುಟುಂಬದ ಸ್ಥಿತಿ ಮತ್ತಷ್ಟು ಅಯೋಮಯವಾಗಿದೆ.
ಶಂಭುಲಿಂಗ್ ಜಡಿಯವರಿಗೆ ಕಿಮ್ಸನಲ್ಲಿ ಚಿಕಿತ್ಸೆ ನೀಡುತ್ತಿದ್ದು, ತೀವ್ರ ಥರದ ಗಾಯಗಳಿಗಾಗಿ ವೈಧ್ಯರು ನಿಗಾವಹಿಸಿದ್ದಾರೆ.
ಶಂಭುಲಿಂಗ್ ಜಡಿ ಎಂಬ ಆಟೋ ಚಾಲಕ ಗಂಭೀರವಾಗಿ ಗಾಯಗೊಂಡು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದಾನೆ…