“93” ಬ್ಯಾಚ್ ರಾಮು ಕೊರವರ ಇನ್ನಿಲ್ಲ

ರಾಮು ಕೊರವರ ಎಲ್ಲಿ ಇರೋತ್ತಾರೋ ಅಲ್ಲಿ ನಗೆ ಕಡಿಮೆಯಿರುತ್ತಿರಲಿಲ್ಲ. ಅಂತಹ ರಾಮಣ್ಣ ಇನ್ನಿಲ್ಲವಾಗಿರುವುದು ಬಹುತೇಕರಿಗೆ ನುಂಗಲಾರದ ತುತ್ತಾಗಿದೆ
ಹುಬ್ಬಳ್ಳಿ: ಕರ್ತವ್ಯದ ಮೇಲೆ ಸೇವೆ ಸಲ್ಲಿಸುತ್ತಿದ್ದ ಬಹುತೇಕರಿಗೆ ಚಿರಪರಿಚಿತರಾಗಿದ್ದ ಮುಖ್ಯ ಪೇದೆಯೋರ್ವರು ಲೋ ಬಿಪಿಯಿಂದ ಸಾವಿಗೀಡಾದ ಘಟನೆ ನಡೆದಿದೆ.
1993 ಬ್ಯಾಚಿನ ರಾಮು ಕೊರವರ ಘಂಟಿಕೇರಿ ಠಾಣೆಯಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದರು. ಹುಬ್ಬಳ್ಳಿ-ಧಾರವಾಡದ ಬಹುತೇಕ ಠಾಣೆಗಳಲ್ಲಿ ಕಾರ್ಯನಿರ್ವಹಿಸಿದ್ದ ರಾಮು ಕೊರವರ ಸಾವು, ಇಲಾಖೆಯಲ್ಲಿ ತೀವ್ರ ಕಳವಳವನ್ನುಂಟು ಮಾಡಿದೆ.
ರಾಮು ಕೊರವರ, ಪ್ರತಿಯೊಂದು ಕಚೇರಿಯಲ್ಲೂ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾಗ ಎಲ್ಲರೊಂದಿಗೆ ಬೆರೆತು ಇರುತ್ತಿದ್ದರು. ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾಗ ತೊಂದರೆಯಾದ ತಕ್ಷಣವೇ ಅವರನ್ನ ಧಾರವಾಡದ ಬಳಿಯಿರುವ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೇ ರಾಮು ಕೊರವರ ನಿಧನರಾಗಿದ್ದಾರೆ. ಇದರಿಂದ ಹುಬ್ಬಳ್ಳಿ-ಧಾರವಾಡದ ಪೊಲೀಸರು ತೀವ್ರ ಬೇಸರವ್ಯಕ್ತಪಡಿಸಿದ್ದಾರೆ.