ಅಕ್ರಮ ಮರಳು ದಂಧೆ: ಪಿಎಸ್ಐ, ಕಾನ್ಸಟೇಬಲ್ ಅಮಾನತ್ತು

ಮೈಸೂರು: ಅಕ್ರಮ ಮರಳು ದಂಧೆಗೆ ಸಹಕಾರ ನೀಡುತ್ತಿದ್ದ ದಂಧೆಕೋರರನ್ನ ಬಂಧನ ಕೆಲವೇ ಗಂಟೆಗಳಲ್ಲಿ ಓರ್ವ ಪಿಎಸ್ಐ ಹಾಗೂ ಕಾನ್ಸಟೇಬಲ್ ಒಬ್ಬರನ್ನ ಅಮಾನತ್ತು ಮಾಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಸುತ್ತೂರು ಶ್ರೀ ಕ್ಷೇತ್ರದ ಕಪಿಲಾ ನದಿಯಲ್ಲೇ ಮರಳು ದಂಧೆ ನಡೆಯುತ್ತಿದ್ದಾಗ ಸುತ್ತೂರು ಶ್ರೀ ಸಹೋದರನಿಗೆ ಅವಾಜ್ ಹಾಕಿದ ದಂಧೆಕೋರರನ್ನ ಕೆಲವೇ ಗಂಟೆಗಳಲ್ಲಿ ದಂಧೆಕೋರರು ಅರೆಸ್ಟ್ ಮಾಡಲಾಗಿತ್ತು. ಆದರೆ, ಅಕ್ರಮ ಮರಳು ದಂಧೆಗೆ ಪೊಲೀಸರೇ ಸಹಕಾರ ನೀಡುತ್ತಿದ್ದರೆಂದು ಹೇಳಲಾಗಿದೆ.
ದಂಧೆಕೋರರಿಗೆ ಸಹಕಾರ ನೀಡಿದ್ದ ಬಿಳಿಗೆರೆ ಠಾಣೆ ಸಬ್ ಇನ್ಸ್ ಪೆಕ್ಟರ್ ಆಕಾಶ ಹಾಗೂ ಪೇದೆ ರಾಮಕೃಷ್ಣ ಅಮಾನತು ಮಾಡಲಾಗಿದೆ. ಸುತ್ತೂರಿನ ಕಪಿಲಾ ನದಿಯಿಂದ ಮರಳು ಲೂಟಿ ನಡೆಯುತ್ತಿದ್ದ ವೇಳೆಯಲ್ಲಿ ಬೆಳಗಿನ ಜಾವ ವಾಕಿಂಗ್ ಗೆ ತೆರಳಿದ್ದ ಸುತ್ತೂರು ಶ್ರೀ ಸಹೋದರ ಉದಯ್ ಶಂಕರ್, ಮರಳು ಯಾಕೆ ತೆಗೆಯುತ್ತಿದ್ದೀರಿ ಅಂತಾ ಪ್ರಶ್ನೆ ಮಾಡಿದ್ದಕ್ಕೆ ದಂಧೆಕೋರರ ಅವಾಜ್ ಹಾಕಿದ್ದರು.
ನಾವೆಲ್ಲಾ ಪಿಎಸ್ಐ ಆಕಾಶ್ ಕಡೆಯವರು, ಮಾಮೂಲಿ ಕೊಟ್ಟು ಮರಳು ತೆಗೆಯುತ್ತಿದ್ದೇವೆ. ಅದನ್ನ ಕೇಳೋಕೆ ನೀವ್ಯಾರು ಅಂತ ಅವಾಜ್ ಹಾಕಿದ್ದರು. ಈ ವಿಚಾರವನ್ನು ಮೈಸೂರು ಎಸ್ಪಿ ರಿಷ್ಯಂತ್ ಗಮನಕ್ಕೆ ತಂದಿದ್ದ ಉದಯಶಂಕರ ತಂದಿದ್ದರು. ತಕ್ಷಣವೇ ಸ್ಥಳಕ್ಕೆ ತೆರಳಿದ್ದ ಎಸ್.ಪಿ. ರಿಷ್ಯಂತ್ ಮರಳು ದಂಧೆಕೋರರ ವಿಚಾರಣೆ ಮಾಡಿದಾಗ, ಪಿಎಸ್ಐ ಅಕಾಶ್ ಗೆ ಮಾಮೂಲಿ ಕೊಡುತ್ತಿದ್ದನ್ನು ಬಾಯಿಬಿಟ್ಟಿದ್ದರು. ದಂಧೆಕೋರರು ಹಾಗೂ ಪಿಎಸ್ಐ ನಡುವೆ ಕಾಲ್ ರೆಕಾರ್ಡ್ಸ್ ಪರಿಶೀಲಿಸಿ ಬಿಳಿಗೆರೆ ಪಿಎಸ್ಐ ಹಾಗೂ ಪೇದೆ ರಾಮಕೃಷ್ಣ ಸಸ್ಪೆಂಡ್ ಮಾಡಿ ಆದೇಶ ಮಾಡಿದ್ದಾರೆ. ಅಕ್ರಮ ಮರಳು ದಂಧೆ ನಡೆಸುತ್ತಿದ್ದ ಮೂವರನ್ನ ಎಸ್ಪಿ ರಿಷ್ಯಂತ್ ಬಂಧಿಸಿ, ಜೈಲಿಗಟ್ಟಿದ್ದಾರೆ.