ವಿನಯ ಕುಲಕರ್ಣಿ ಬಂಧನಕ್ಕೆ ಎರಡು ತಿಂಗಳು…!
1 min readಧಾರವಾಡ: ಜಿಲ್ಲೆಯ ಹೆಬ್ಬಳ್ಳಿ ಜಿಲ್ಲಾ ಪಂಚಾಯತಿಯ ಭಾರತೀಯ ಜನತಾ ಪಕ್ಷದ ಸದಸ್ಯ ಯೋಗೇಶಗೌಡ ಗೌಡರ ಹತ್ಯೆ ಪ್ರಕರಣದಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಬಂಧನವಾಗಿ ಇಂದಿಗೆ ಬರೋಬ್ಬರಿ ಎರಡು ತಿಂಗಳು ಕಳೆದವು.
ನವೆಂಬರ್ 5 ರಂದು ಬೆಳಿಗ್ಗೆ 7.15 ರ ಸುಮಾರಿಗೆ ಸಿಬಿಐ ವಿನಯ ಕುಲಕರ್ಣಿಯವರ ನಿವಾಸದಿಂದ ವಶಕ್ಕೆ ಪಡೆದಿತ್ತು. ಅದಾದ ನಂತರ ಧಾರವಾಡದ ಉಪನಗರ ಠಾಣೆಗೆ ಕರೆದುಕೊಂಡು ಬಂದು ಮಧ್ಯಾಹ್ನ ಮೂರುವರೆವರೆಗೂ ವಿಚಾರಣೆಯನ್ನ ನಡೆಸಿತ್ತು.
ಇಳಿಸಂಜೆ ಮಾಜಿ ಸಚಿವ ವಿನಯ ಕುಲಕರ್ಣಿಯವರ ಬಂಧನವನ್ನ ಖಚಿತಪಡಿಸಿ, ಬೆಳಗಾವಿಯ ಹಿಂಡಲಗಾ ಜೈಲಿಗೆ ಬಿಟ್ಟು ಕಳಿಸಲಾಗಿತ್ತು. ಮರುದಿನ ಮತ್ತೆ ಮೂರು ದಿನ ವಿನಯ ಕುಲಕರ್ಣಿ ಅವರನ್ನ ಸಿಬಿಐ ತಮ್ಮ ಕಸ್ಟಡಿಗೆ ಪಡೆದು ವಿಚಾರಣೆಯನ್ನ ನಡೆಸಿತ್ತು.
ಇಷ್ಟೇಲ್ಲ ನಡೆದ ಮೇಲೆ ಮತ್ತೆ ಅವರನ್ನ ಹಿಂಡಲಗಾ ಜೈಲಿನಲ್ಲಿಯೇ ಈಡಲಾಗಿದ್ದು, ತಮ್ಮ ಜಾಮೀನು ಸಂಬಂಧವಾಗಿ ಮೊದಲು ಅರ್ಜಿ ಸಲ್ಲಿಸಿ ಮತ್ತೆ ಮರಳಿ ಪಡೆದಿದ್ದರು. ಇದಾದ ನಂತರ ಮತ್ತೆ ಅರ್ಜಿ ಸಲ್ಲಿಕೆ ಮಾಡಿದರಾದರೂ, ಜಾಮೀನು ಅರ್ಜಿಯನ್ನ ವಜಾ ಮಾಡಲಾಗಿತ್ತು. ಈಗ ಮತ್ತೆ ಜಾಮೀನಿಗಾಗಿ ಅರ್ಜಿಯನ್ನ ಹೈಕೋರ್ಟಗೆ ಸಲ್ಲಿಕೆ ಮಾಡಿದ್ದಾರೆ.
ಈ ಎಲ್ಲವೂ ನಡೆಯುತ್ತಿದ್ದಾಗಲೇ ಬರೋಬ್ಬರಿ 60 ದಿನಗಳು ಮುಗಿದು ಹೋದವು ಎನ್ನುವುದೇ..