ಅತ್ತಿಗೆ ಮೈದುನ ಲವ್ವಿ ಡವ್ವಿ: ಪತಿಯಿಂದ ಮಾರಣಹೋಮ

ವಿಜಯಪುರ: ತನ್ನ ಅತ್ತಿಗೆಯೊಂದಿಗೆ ವಿವಾಹಯೇತರ
ಸಂಬಂಧ ಹೊಂದಿದ್ದ ಸಹೋದರ ಹಾಗೂ ಪತ್ನಿಯನ್ನ ಕೊಲೆ ಮಾಡಿದ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಬಂಥನಾಳ ಗ್ರಾಮದ ತೋಟದ ಮನೆಯಲ್ಲಿ ನಡೆದಿದೆ.
ರುದ್ರಪ್ಪ ಅಲಮೇಲ ತನ್ನ ಅಣ್ಣನ ಹೆಂಡತಿ ಈರಮ್ಮಳ ಜೊತೆ ಅನೈತಿಕ ಸಂಬಂಧ ಹೊಂದಿದ್ದ. ಈ ವಿಷಯ ಅರಿತಿದ್ದ ಪತಿ ಲಕ್ಷ್ಮಣ ಇಬ್ಬರನ್ನೂ ರೆಡ್ ಹ್ಯಾಂಡಾಗಿ ಹಿಡಿಯಬೇಕೆಂದು ನಿರ್ಧರಿಸಿದ್ದ. ಅದೇ ಕಾರಣಕ್ಕೆ ತೋಟದ ಮನೆಯಲ್ಲಿ ಹೊಂಚು ಹಾಕಿ ಕುಳಿತುಕೊಂಡಿದ್ದ.
ಈ ಸಮಯದಲ್ಲಿ ಮೈದುನ- ಅತ್ತಿಗೆ ಕಾಮಕ್ರೀಡೆಯಲ್ಲಿ ತೊಡಗುವ ಹಂತದಲ್ಲಿದ್ದಾಗಲೇ ಪತಿ ಲಕ್ಷ್ಮಣ, ಮಾರಕಾಸ್ತ್ರಗಳನ್ನ ಅವರಿಬ್ಬರ ಮೇಲೆ ಬೀಸಿದ್ದಾನೆ. ಆತನ ದ್ವೇಷಕ್ಕೆ ಇಬ್ಬರು ಬಲಿಯಾಗಿದ್ದಾರೆ.
ಲಕ್ಷ್ಮಣ ಅಲಮೇಲ ಎಂಬ ಹತ್ಯೆಕೋರ ಮಡದಿಯ ಮುಖದ ಚರ್ಮವನ್ನ ತೆಗೆದು ಹಾಕಿದ್ದಾನೆ. ಅಷ್ಟೊಂದು ಕ್ರೂರಿಯಾಗುವಂತ ದೃಶ್ಯವನ್ನ ಆತ ನೋಡಿದ್ದನೆನ್ನಲಾಗಿದೆ.
ಪ್ರಕರಣವನ್ನ ದಾಖಲು ಮಾಡಿಕೊಂಡಿರುವ ಇಂಡಿ ಗ್ರಾಮೀಣ ಠಾಣೆ ಪೊಲೀಸರು, ಆರೋಪಿಯನ್ನ ಬಂಧಿಸಿ ಕ್ರಮ ಜರುಗಿಸಿದ್ದಾರೆ.