ಲಾರಿಗೆ ಬೈಕ್, ಬೈಕ್ ಪಾದಚಾರಿ ಮಹಿಳೆಗೆ ಡಿಕ್ಕಿ- ಸವಾರ ಸಾವು, ಮಹಿಳೆ ಸ್ಥಿತಿ ಗಂಭೀರ

ಧಾರವಾಡ: ಚವರಗುಡ್ಡದಿಂದ ಇಟಿಗಟ್ಟಿಗೆ ಹೋಗುತ್ತಿದ್ದ 6 ಮಹಿಳೆಯರು ರೋಡ್ ಕ್ರಾಸ್ ಮಾಡುವಾಗ ಸಮಯದಲ್ಲೇ ಬೈಕಿಗೆ ಲಾರಿ ಡಿಕ್ಕಿ ಹೊಡೆದು, ಬೈಕ್ ಪಾದಚಾರಿ ಮಹಿಳೆಗೆ ಅಪಘಾತಪಡಿಸಿದ ಘಟನೆ ಧಾರವಾಡ ಸಮೀಪದ ಇಟಿಗಟ್ಟಿ ಕ್ರಾಸ್ ಬಳಿ ಸಂಭವಿಸಿದೆ.
ವ್ರದ್ದೆಯೊಬ್ಬರಿಗೆ ಬೈಕ್ ಸವಾರ ಗುದ್ದಿ ನಿಯಂತ್ರಣ ತಪ್ಪಿ ಹೆದ್ದಾರಿಯಲ್ಲಿ ಬಿದ್ದ ಪರಿಣಾಮ ಹಿಂಬದಿಯಿಂದ ಬರುತ್ತಿದ್ದ ಲಾರಿ ಬೈಕ್ ಸವಾರನ ಮೇಲೆ ಹರಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಇಟಿಗಟ್ಟಿ ಕ್ರಾಸ್ ಬಳಿ ನಡೆದಿದೆ.
ಬೈಕ್ ಸವಾರ ಹನುಮಂತಪ್ಪ ಕುರಿಯವರ ಎಂದು ತಿಳಿದಿದ್ದು ಈತ ಹುಬ್ಬಳ್ಳಿಯಿಂದ ಹೊಸ ಯಲ್ಲಾಪುರಕ್ಕೆ ಹೋಗುತ್ತಿದ್ದ ಎಂದು ತಿಳಿದು ಬಂದಿದೆ. ಅಪಘಾತದಲ್ಲಿ ಗಾಯಗೊಂಡ ಪಾರಮ್ಮ ಎಂಬ ವೃದ್ಧೆಯನ್ನು ಧಾರವಾಡದ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.
ಈ ಘಟನೆಯ ಸಂಬಂಧ ಧಾರವಾಡದ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.