“ದಿಲ್ ಮಾಂಗೇ ಮೋರ್”- ನವಿಲು ಸಾಕಿದವ ಅಂದರ್

ಹುಬ್ಬಳ್ಳಿ: ಅಕ್ರಮವಾಗಿ ಕೋಳಿಗಳೊಂದಿಗೆ ನವಿಲನ್ನು ಸಾಕಿದ ಆರೋಪಿಯನ್ನು ಬಂಧಿಸಿ ಆತನಿಂದ ಒಂದು ನವಿಲನ್ನು ವಶಪಡಿಸಿಕೊಳ್ಳುವಲ್ಲಿ ಅರಣ್ಯ ಸಂಚಾರಿ ದಳದ ಪೊಲೀಸರು ಯಶಸ್ವಿಯಾಗಿದ್ದಾರೆ.
ನವಲಗುಂದ ತಾಲೂಕಿನ ಅಳಗವಾಡಿ ಗ್ರಾಮದ ಮೈಲಾರಿ ಮಲ್ಲಪ್ಪ ಚಿಗರಿಕ್ಯಾರ ಎಂಬ ವ್ಯಕ್ತಿಯೇ ಮನೆಯಲ್ಲಿ ನವಿಲನ್ನು ಸಾಕಿದ್ದ. ಆದ್ರೆ, ಇದು ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಅಪರಾಧವಾಗಿದ್ದು, ನವಿಲನ್ನ ಸಾಕಿದವನನ್ನ ಬಂಧಿಸಿ, ನವಿಲನ್ನು ಅರಣ್ಯ ಇಲಾಖೆಯ ವಶಕ್ಕೆ ನೀಡಲಾಗಿದೆ.
ಖಚಿತ ಮಾಹಿತಿ ಮೇರೆಗೆ PSI ಮಹಾದೇವ ಯಲಿಗಾರ, ಸಿಬ್ಬಂದಿಗಳಾದ ಎಸ್.ಎಸ್. ಪಾಟೀಲ್, ಆರ್.ವಿ.ಕುಂಬಾರ, ಎಂ ಬಿ ಕಾಂತೇಶ್ ರೆಡ್ಡಿ, ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.
ಯಾವುದೇ ರೀತಿಯ ಕಾಡುಪ್ರಾಣಿ-ಪಕ್ಷಿಗಳನ್ನ ಮನೆಯಲ್ಲಿ ಸಾಕುವುದು ಕೂಡಾ ಅಪರಾಧವೆಂದು ಸಾರ್ವಜನಿಕರು ತಿಳಿದುಕೊಳ್ಳಬೇಕು. ಯಾರಾದರೂ ಹೀಗೆ ಪಕ್ಷಿಗಳನ್ನ ಸಾಕಿದ್ದರೇ ಪೊಲೀಸರಿಗೆ ಮಾಹಿತಿ ನೀಡುವಂತೆ ಪಿಎಸ್ಐ ಮಹದೇವ ಯಲಿಗಾರ ಮನವಿ ಮಾಡಿದ್ದಾರೆ.