‘BRTS ಚಿಗರಿ’ಗೆ ಬಲಿಯಾದ ‘TVS ಯುವಕ’
1 min readಹುಬ್ಬಳ್ಳಿ: BRTS ಲೈನದಲ್ಲಿ ಖಾಸಗಿ ವಾಹನಗಳಿಗೆ ನಿಷೇಧವಿದ್ದರೂ, ಅದೇ ಲೈನದಲ್ಲಿ TVS ಬೈಕ್ ಚಲಾಯಿಸುತ್ತಿದ್ದ ಸಮಯದಲ್ಲಿ ಅಪಘಾತ ನಡೆದು, ಸ್ಥಳದಲ್ಲಿಯೇ ಯುವಕ ಸಾವಿಗೀಡಾದ ಘಟನೆ ನಡೆದಿದೆ.
ಹುಬ್ಬಳ್ಳಿಯ ವೈಷ್ಣವಿ ಕಾಲೇಜು ಬಳಿಯಲ್ಲಿ ಘಟನೆ ನಡೆದಿದ್ದು, ಬೈಕ್ ಸವಾರನ ಅತಿಯಾದ ವೇಗವೇ ಅಪಘಾತಕ್ಕೆ ಕಾರಣವಾಗಿದೆ. ಹೆಲ್ಮೇಟ್ ಇದ್ದರೂ ಆತನ ಜೀವ ಉಳಿಯದೇ ಇರುವುದು ಮತ್ತಷ್ಟು ಬೇಸರದ ಸಂಗತಿಯಾಗಿದೆ.
ಚಿಗರಿ ಬಸ್ ಹಾಗೂ ಬೈಕ್ ಪರಸ್ಪರ ಮುಖಾಮುಖಿ ಡಿಕ್ಕಿಯಾಗಿದೆ. ತೀವ್ರ ರಕ್ತಸ್ರಾವವಾಗುತ್ತಿದ್ದ ಸಮಯದಲ್ಲಿ ಯುವಕನನ್ನ ತಕ್ಷಣ ಕಿಮ್ಸಗೆ ರವಾನೆ ಮಾಡಲಾಯಿತಾದರೂ ಚಿಕಿತ್ಸೆ ಫಲಿಸದೇ ಯುವಕ ಸಾವಿಗೀಡಾಗಿದ್ದಾನೆ.
ಹುಬ್ಬಳ್ಳಿಯ ಉತ್ತರ ಸಂಚಾರಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕಾನೂನು ಕ್ರಮವನ್ನ ಜರುಗಿಸಲಾಗಿದೆ.