Posts Slider

Karnataka Voice

Latest Kannada News

ಕುಂದಗೋಳ: ವಿಷ ಸೇವಿಸಿದ ವಿವಾಹಿತೆ, ರೋಡ್ ಹಂಪ್ಸಗೆ ಮಹಿಳೆ ಬಲಿ, ಅಪಘಾತದಲ್ಲಿ ನಾಲ್ವರಿಗೆ ಗಾಯ

1 min read
Spread the love

ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಕುಂದಗೋಳದ ಮಹಿಳೆ

ಧಾರವಾಡ: ವಿವಾಹಿತ ಮಹಿಳೆಯೊಬ್ಬಳು ಮಾನಸಿಕವಾಗಿ ನೊಂದು ವಿಷ ಸೇವಿಸಿ ಆತ್ಮಹತ್ಯಗೆ ಪ್ರಯತ್ನಿಸಿದ ಘಟನೆ ಧಾರವಾಡ ಜಿಲ್ಲೆಯ ಕುಂದಗೋಳದಲ್ಲಿ ನಡೆದಿದೆ.

ಧಾರವಾಡ ಜಿಲ್ಲೆಯ ಕುಂದಗೋಳದ ನಿವೇದಿತಾ ದೌಗಿ ಎಂಬ 24 ವಯಸ್ಸಿನ ಮಹಿಳೆಯೇ ವಿಷ ಸೇವಿಸಿ ಆತ್ಮಹತ್ಯಗೆ ಯತ್ನಿಸಿದ್ದು, ತಕ್ಷಣವೇ ಅವರನ್ನ ಹುಬ್ಬಳ್ಳಿಯ ಕಿಮ್ಸಗೆ ದಾಖಲು ಮಾಡಿದ್ದಾರೆ.

ವಿಷಸೇವಿಸಿದ ಮಹಿಳೆಯನ್ನ ಕುಂದಗೋಳ ತಾಲೂಕು ಆಸ್ಪತ್ರೆಗೆ ಮೊದಲು ದಾಖಲು ಮಾಡಲಾಯಿತ್ತಾದರೂ, ಸ್ಥಿತಿ ಗಂಭೀರವಾದ ಕಾರಣ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುತ್ತಿದೆ.

ವಿಷಸೇವಿಸಿರುವ ಮಹಿಳೆಯನ್ನ ಉಳಿಸಿಕೊಳ್ಳಲು ಕಿಮ್ಸನ ವೈಧ್ಯರು ಹರಸಾಹಸ ಪಡುತ್ತಿದ್ದು, ಚಿಕಿತ್ಸೆ ಫಲಿಸುವ ಆಶಾಭಾವನೆ ಹೊಂದಿದ್ದಾರೆ. ಈ ಸಂಬಂಧ ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಯಾವ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂಬುದರ ಬಗ್ಗೆ ಮಾಹಿತಿಯನ್ನ ಕಲೆ ಹಾಕುತ್ತಿದ್ದಾರೆ.

ರೋಡ್ ಹಂಪ್ಸಗೆ ಮಹಿಳೆ ಬಲಿ- ಕುಂದಗೋಳದ ಶಿರೂರ ಬಳಿ ದುರ್ಘಟನೆ

ಧಾರವಾಡ: ರಾತ್ರಿ ಸಮಯದಲ್ಲಿ ರೋಡ್ ಹಂಪ್ಸ್ ಮೇಲೆ ಬೈಕ್ ಹತ್ತಿ ಇಳಿದ ಪರಿಣಾಮ ಹಿಂಬದಿ ಕುಳಿತಿದ್ದ ಮಹಿಳೆಯೊರ್ವರು  ನಿಯಂತ್ರಣ ತಪ್ಪಿ ಬಿದ್ದ ಪರಿಣಾಮ ಗಂಭೀರವಾಗಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೆ ಸಾವನಪ್ಪಿದ ಘಟನೆ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಶಿರೂರ ಬಳಿ ನಡೆದಿದೆ..

ನಿನ್ನೇ ರಾತ್ರಿ 11 ರ ಸುಮಾರಿಗೆ ಲಕ್ಷೇಶ್ವರ ದಿಂದ ಹಳ್ಯಾಳ ಕ್ಕೆ ಹೋಗುವಾಗ ಈ ಘಟನೆ ಸಂಭವಿಸಿದ್ದು, ಬೈಕ್ ಹಿಂಬದಿ ಕೂತಿದ್ದ  ಗೀತಾ ದೊಡ್ಡಬಸಪ್ಪ ಹಳ್ಯಾಳ ಎಂಬ ಮಹಿಳೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಸತ್ತೂರ ಬಳಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ..

ಈ ಘಟನೆಯೇ ಸಂಬಂದ ಕುಂದಗೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್ ಮುಖಾಮುಖಿ ಡಿಕ್ಕಿ- ನಾಲ್ವರಿಗೆ ಗಾಯ

ಧಾರವಾಡ: ಎರಡು ಬೈಕುಗಳು ಮುಖಾಮುಖಿಯಾಗಿ ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ತೀವ್ರವಾಗಿ ಗಾಯಗೊಂಡ ಘಟನೆ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಕುಬಿಹಾಳ ಗ್ರಾಮದ ಬಳಿ ಸಂಭವಿಸಿದೆ.

ಘಟನೆಯಲ್ಲಿ ಕಲಘಟಗಿ ತಾಲೂಕಿನ ಮಿಶ್ರಿಕೋಟಿ ಗ್ರಾಮದ ಕುಶಾಲ ಚಲವಾದಿ, ಲೋಕೇಶ ಚಲವಾದಿ, ಕುಂದಗೋಳ ತಾಲೂಕಿನ ಕುಬಿಹಾಳ ಗ್ರಾಮದ ಕಿರಣ ಗಾಳಿ ಹಾಗೂ ಕೋಟೇಪ್ಪ ಗಾಯಗೊಂಡಿದ್ದಾರೆ.

ದಾರಿ ಹೋಕರು ರಸ್ತೆಯಲ್ಲಿ ಬಿದ್ದ ನಾಲ್ವರನ್ನ ನೋಡಿ ತಕ್ಷಣವೇ ಅಂಬ್ಯಲೆನ್ಸಗೆ ಕಾಲ್ ಮಾಡಿ, ಕಿಮ್ಸಗೆ ರವಾನೆ ಮಾಡಿದ್ದಾರೆ. ನಾಲ್ವರಿಗೂ ತೀವ್ರ ಥರದ ಗಾಯಗಳಾಗಿದ್ದು, ಚಿಕಿತ್ಸೆ ಸ್ಪಂಧಿಸುತ್ತಿದ್ದಾರೆಂದು ಕಿಮ್ಸ್ ವೈಧ್ಯರು ಹೇಳಿದ್ದಾರೆ.

ಪ್ರಕರಣ ದಾಖಲು ಮಾಡಿಕೊಂಡಿರುವ ಕುಂದಗೋಳ ಠಾಣೆಯ ಪೊಲೀಸರು, ಬೈಕುಗಳನ್ನ ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.


Spread the love

Leave a Reply

Your email address will not be published. Required fields are marked *