ವಿಜಯ ಬಿರಾದಾರ, ಶ್ರೀಧರ ಸತಾರೆ ಸೇರಿದಂತೆ 142 ಇನ್ಸಪೆಕ್ಟರ್ ವರ್ಗಾವಣೆ

ಬೆಂಗಳೂರು: ಕರ್ನಾಟಕ ರಾಜ್ಯ ಗೃಹ ಇಲಾಖೆ 142 ಇನ್ಸಪೆಕ್ಟರಗಳನ್ನ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದ್ದು, ಹುಬ್ಬಳ್ಳಿ ಧಾರವಾಡದ ಹಲವು ಠಾಣೆಗಳಲ್ಲಿ ಸ್ಥಾನ ಪಲ್ಲಟವಾಗಿವೆ.
ಹಲವು ವರ್ಷಗಳಿಂದ ಕಲಘಟಗಿಯಲ್ಲಿ ದಕ್ಷ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದ ವಿಜಯ ಬಿರಾದಾರ ವರ್ಗಾವಣೆಯಾಗಿದ್ದು, ಅವರನ್ನ ಧಾರವಾಡ ಜಿಲ್ಲೆಯ ಸಿಇಎನ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಧಾರವಾಡ ಶಹರ ಠಾಣೆಯ ಇನ್ಸಪೆಕ್ಟರಾಗಿದ್ದ ಶ್ರೀಧರ ಸತಾರೆ ಅವರ ವರ್ಗಾವಣೆಯಾಗಿದ್ದು, ಅವರ ಜಾಗಕ್ಕೆ ಸಂಗಮೇಶ ದಿಂಡಿಗನಾಳರನ್ನ ವರ್ಗಾವಣೆ ಮಾಡಲಾಗಿದೆ.
ಹುಬ್ಬಳ್ಳಿ ಅಶೋಕನಗರ ಠಾಣೆ ಇನ್ಸಪೆಕ್ಟರ್ ರವಿಚಂದ್ರ ಬಡಫಕ್ಕೀರಪ್ಪನವರನ್ನ ಹುಬ್ಬಳ್ಳಿ ಉಪನಗರ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಉಪನಗರ ಠಾಣೆಯಲ್ಲಿದ್ದ ಸುಂದರೇಶ ಹೊಳೆಣ್ಣನವರನ್ನ ಎಸಿಬಿಗೆ ವರ್ಗಾವಣೆ ಮಾಡಲಾಗಿದೆ. ಹಾಗೇ ಬೆಂಡಿಗೇರಿ ಠಾಣೆಯಿಂದ ಅರುಣ ಸಾಳುಂಕೆಯವರನ್ನ ಅಶೋಕನಗರ ಠಾಣೆಗೆ ವರ್ಗಾಯಿಸಲಾಗಿದೆ. ಸಿಸಿಐಬಿಯಲ್ಲಿದ್ದ ಅಲ್ತಾಫ ಮುಲ್ಲಾ ಅವರನ್ನ ಸಿಸಿಬಿಗೆ ವರ್ಗಾವಣೆ ಮಾಡಲಾಗಿದೆ.