ಹುಬ್ಬಳ್ಳಿ ಮಗುವಿನ ಅಪಹರಣ ಪ್ರಕರಣಕ್ಕೆ ಟ್ವಿಸ್ಟ್: ಬಾಡಿಗೆ ಮನೆಯಲ್ಲೇ ಶವವಾಗಿ ಪತ್ತೆ..!

ಹುಬ್ಬಳ್ಳಿ: ನಾಲ್ಕು ದಿನದ ಹಿಂದೆ ಅಪಹರಣವಾಗಿದೆ ಎಂದು ದೂರು ನೀಡಿದ್ದ ಪ್ರಕರಣವೊಂದು ಬೇರೆಯದ್ದೇ ಟ್ವಿಸ್ಟ್ ಪಡೆದಿದ್ದು, ಮಗುವೊಂದು ಪಕ್ಕದ ಮನೆಯಲ್ಲೇ ಶವವಾಗಿ ಸಿಕ್ಕಿರುವ ಘಟನೆ ಹುಬ್ಬಳ್ಳಿಯ ಭಾರತನಗರದಲ್ಲಿ ನಡೆದಿದೆ.
ನಾಲ್ಕು ದಿನದ ಹಿಂದೆ ಮಗು ಕಿಡ್ನ್ಯಾಪ್ ಆಗಿದೆ ಎಂದು ಪೊಲೀಸರಿಗೆ ದೂರು ನೀಡಿದ್ದ ಶ್ರೇಯಾ ತಂದೆ ಹನಮಂತಪ್ಪನಿಗೆ ಇಂದು ಮಗುವಿನ ಶವ ಪಕ್ಕದ ಮನೆಯಲ್ಲಿಯೇ ಸಿಕ್ಕಿದ್ದು, ಆಕಾಶವೇ ತಲೆಕೆಳಗಾದಂತಾಗಿದೆ.
ಹನಮಂತಪ್ಪ ಗಾಳಪ್ಪನವರ ಪುತ್ರಿಯಾಗಿದ್ದ 5 ವರ್ಷದ ಶ್ರೇಯಾ ಶವವಾಗಿ ಪತ್ತೆಯಾಗಿದ್ದು, ತಾವೇ ಬಾಡಿಗೆ ನೀಡಿದ ಮನೆಯ ನೀರಿನ ಟ್ಯಾಂಕಿನಲ್ಲಿ.
ಸ್ಥಳದಲ್ಲಿ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದ್ದು, ಬಾಡಿಗೆ ಮನೆಯಲ್ಲಿದ್ದವರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕರಣವನ್ನ ದಾಖಲು ಮಾಡಿಕೊಂಡಿರುವ ಹಳೇಹುಬ್ಬಳ್ಳಿ ಠಾಣೆ ಪೊಲೀಸರು ಮುಂದಿನ ಕಾನೂನು ಕ್ರಮವನ್ನ ಜರುಗಿಸಿದ್ದಾರೆ.