Posts Slider

Karnataka Voice

Latest Kannada News

ಸಚಿವ ಸಂಪುಟ ವಿಸ್ತರಣೆ ಮತ್ತೆ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ  ಅನ್ಯಾಯ..?

1 min read
Spread the love

ಪಂಚಮಸಾಲಿ ಸಮುದಾಯಕ್ಕೆ ಮಂತ್ರಿಗಿರಿಯನ್ನ ಕೊಡಬೇಕೆಂದು ಹರಿಹರದ ಪಂಚಮಸಾಲಿ ಪೀಠದ ಶ್ರೀಗಳು ಬಹಿರಂಗವಾಗಿಯೇ ಸಿಎಂ ಎದುರಿಗೆ ತಮ್ಮ ನೋವನ್ನ ತೋಡಿಕೊಂಡಿದ್ದರು. ಅಷ್ಟೇ ಅಲ್ಲ, ಜಯ ಮೃತ್ಯುಂಜಯ ಮಹಾಸ್ವಾಮಿಗಳು ಕೂಡಾ ನಮಗೆ ಮಂತ್ರಿಗಿರಿ ಬೇಡಾ ಸಿಎಂ ಸ್ಥಾನವನ್ನೇ ಕೊಡಬೇಕೆಂದು ಬೇಡಿಕೆಯಿಟ್ಟಿದ್ದು ಎಲ್ಲರಿಗೂ ಗೊತ್ತಿರುವ ವಿಚಾರವೇ..

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಹಲವು ರೀತಿಯಲ್ಲಿ ಗೊಂದಲ ಸೃಷ್ಠಿಸಿದ್ದ ಮಂತ್ರಿ ಮಂಡಲ ವಿಸ್ತರಣೆಗೆ ದಿನಾಂಕವನ್ನ ನಿಗದಿ ಮಾಡಿದ್ದು, ತೀವ್ರ ಹೋರಾಟ ಮಾಡಿದ್ದ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಮತ್ತೆ ಅನ್ಯಾಯವಾಗುತ್ತಿದೆ ಎಂದು ಹೇಳಲಾಗುತ್ತಿದೆ.

ರಾಜ್ಯದ ಭಾರತೀಯ ಜನತಾ ಪಕ್ಷದ ಶಾಸಕರ ಪೈಕಿ ಅತಿ ಹೆಚ್ಚು ಶಾಸಕರಿರುವುದು ಲಿಂಗಾಯತ ಪಂಚಮಸಾಲಿ ಸಮುದಾಯದ 13 ಶಾಸಕರು. ಆದರೆ, ಆ ಸಮುದಾಯದ ಮತ್ತೋಬ್ಬರಿಗೆ ಮಂತ್ರಿ ಸ್ಥಾನ ಕೊಡುವಂತೆ ಸಾಕಷ್ಟು ಚರ್ಚೆ- ವಾದ ವಿವಾದಗಳು ಕೂಡಾ ನಡೆದವು. ಇಷ್ಟೇಲ್ಲಾ ಆದರೂ, ಮಂತ್ರಿ ಮಂಡಲದ ಪಂಚಮಸಾಲಿ ಸಮುದಾಯಕ್ಕೆ ಅವಕಾಶ ಸಿಗುವುದು ತೀರಾ ಕಡಿಮೆ ಎನ್ನಲಾಗುತ್ತಿದೆ.

ಉತ್ತರ ಕರ್ನಾಟಕದಲ್ಲಿ ಪ್ರಭಾವಿ ನಾಯಕರನ್ನ ಹೊಂದಿರುವ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಈ ಬಾರಿ ಮಂತ್ರಿ ಮಂಡಲದಲ್ಲಿ ಅವಕಾಶ ಸಿಗುವ ನಿರೀಕ್ಷೆಯನ್ನ ಸಾಕಷ್ಟು ಹೊಂದಲಾಗಿತ್ತು. ಆದರೆ, ಈಗ ನಡೆಯುತ್ತಿರುವ ಬೆಳವಣಿಗೆಯನ್ನ ನೋಡಿದರೇ, ಮತ್ತೆ ಆ ಸಮುದಾಯಕ್ಕೆ ಅನ್ಯಾಯವಾಗುತ್ತದೆ ಎಂದು ಹೇಳಲಾಗುತ್ತಿದೆ.

ಮಂತ್ರಿ ಮಂಡಲದ ಯೋಗ್ಯತೆಯಿರುವ ಹಲವರಿಗೆ ನಿಗಮವನ್ನ ನೀಡಲಾಗಿದೆ. ಆದರೆ, ಅವರೆಲ್ಲರೂ ಸಚಿವರಾಗಬೇಕೆಂದು ಸಮುದಾಯದ ಜನರ ಬಯಕೆಯಾಗಿತ್ತು. ಆದರೆ, ಆ ನಿರೀಕ್ಷೆ ಈ ಮಂತ್ರಿ ಮಂಡಲದಲ್ಲಿಯೂ ನಿರಾಸೆ ಮೂಡಿಸಲಿದೆ ಎನ್ನಲಾಗುತ್ತಿದೆ.


Spread the love

Leave a Reply

Your email address will not be published. Required fields are marked *