ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷಗಿರಿ: ವಿನೋದ ಅಸೂಟಿಗೆ ಟಫ್ ಪೈಟ್

ಧಾರವಾಡ: ಜಿಲ್ಲೆಯಲ್ಲಿ ಯುವ ಕಾಂಗ್ರೆಸ್ ಅಧ್ಯಕ್ಷಗಿರಿಗಾಗಿ ನಾಳೆ ಚುನಾವಣೆ ನಡೆಯಲಿದ್ದು, ಹಾಲಿ ಅಧ್ಯಕ್ಷ ವಿನೋದ ಅಸೂಟಿ ವಿರುದ್ಧ ಕಲಘಟಗಿಯ ನವೀನ ಸೋನಾರ ಟಫ್ ಫೈಟ್ ಕೊಡಲಿದ್ದಾರೆಂದು ಹೇಳಲಾಗುತ್ತಿದ್ದು, ಯುವ ಕಾಂಗ್ರೆಸ್ ನಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಧಾರವಾಡ ಜಿಲ್ಲೆಯಲ್ಲಿ ಒಟ್ಟು ಎಂಟು ಸಾವಿರಕ್ಕೂ ಅಧಿಕ ಯುವ ಕಾಂಗ್ರೆಸ್ ಮತಗಳಿದ್ದು, ಅವುಗಳಲ್ಲಿ ನವಲಗುಂದ ಮತ್ತು ಕಲಘಟಗಿಯಲ್ಲಿ ಹೆಚ್ಚು ಸದಸ್ಯರಿದ್ದಾರೆ. ಹೀಗಾಗಿ ಎರಡು ಪ್ರಮುಖ ಪಟ್ಟಣಗಳಲ್ಲಿ ಆಕಾಂಕ್ಷಿಗಳು ಇರುವುದರಿಂದ ವಿನೋದ ಅಸೂಟಿಯವರಿಗೆ ಈ ಬಾರಿ ಚುನಾವಣೆ ಅಷ್ಟೊಂದು ಸರಳವಾಗಿಲ್ಲ ಎನ್ನಲಾಗುತ್ತಿದೆ.
ಯುವ ಕಾಂಗ್ರೆಸ್ ಕೋಟಾದಲ್ಲಿ ಈಗಾಗಲೇ ವಿನೋದ ಅಸೂಟಿ ನವಲಗುಂದ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣೆ ಎದುರಿಸಿದ್ದರು. ಈಗ ಮತ್ತೋಮ್ಮೆ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷಗಿರಿ ಪಡೆಯಲು ವಿನೋದ ಅಸೂಟಿ ಅದೃಷ್ಟದಾಟಕ್ಕೆ ಮುಂದಾಗಿದ್ದಾರೆ. ಆದರೆ, ಅದಕ್ಕೆ ಕಲಘಟಗಿಯ ನವೀನ ಸೋನಾರ, ತಡೆಯಾಗಲಿದ್ದಾರೆಂಬ ಮಾತುಗಳು ಕೇಳಿ ಬರುತ್ತಿವೆ.
ಮೂಲತಃ ಕಲಘಟಗಿಯ ನವೀನ ಸೋನಾರ ವಿದ್ಯಾರ್ಥಿ ದೆಸೆಯಿಂದಲೂ ಹೋರಾಟ ಮಾಡುತ್ತ ಬಂದಿದ್ದು, ಇದೀಗ ಯುವ ಕಾಂಗ್ರೆಸ್ ಮೇಲೆ ತನ್ನ ಕಣ್ಣು ನೆಟ್ಟಿದ್ದಾರೆ. ಇದರಲ್ಲಿ ಯಾರೂ ವಿಜಯಮಾಲೆ ಧರಿಸುತ್ತಾರೆಂಬುದನ್ನ ಕಾದು ನೋಡಬೇಕಿದೆ.