ಚಿಂತಾಜನಕ ಸ್ಥಿತಿಯಲ್ಲಿ ಕೇಂದ್ರ ಸಚಿವ: ಗೋವಾ ಆಸ್ಪತ್ರೆಗೆ ರವಾನೆ
1 min readಉತ್ತರಕನ್ನಡ: ಜಿಲ್ಲೆಯ ಹೊಸಕಂಬಿ ಹೆದ್ದಾರಿಯಲ್ಲಿ ಕಾರು ನಡೆದ ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಕೇಂದ್ರ ಸಚಿವರ ಸ್ಥಿತಿ ಚಿಂತಾಜನಕವಾಗಿದ್ದು, ಅವರನ್ನ ಗೋವಾದ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಘಟನೆಯಲ್ಲಿ ಈಗಾಗಲೇ ಕೇಂದ್ರ ಆಯುಷ್ ಇಲಾಖೆ ಸಚಿವ ಶ್ರೀ ಪಾದ ನಾಯ್ಕ ಅವರ ಪತ್ನಿ ವಿಜಯಾ ನಾಯಕ ಸಾವನ್ನಪ್ಪಿದ್ದು, ಸಚಿವರ ಆಪ್ತ ಕಾರ್ಯದರ್ಶಿ ದೀಪಕ ರಾಮದಾದ ಗೂಮೆ ಕೂಡಾ ಸಾವಿಗೀಡಾಗಿದ್ದಾರೆ.
ಸಚಿವ ಶ್ರೀಪಾದ ನಾಯಕ ಗಂಭೀರವಾಗಿ ಗಾಯಗೊಂಡಿದ್ದು ಘಟನೆ ತಾಲೂಕಿನ ಹೊಸಕಂಬಿ ಹೆದ್ದಾರಿಯಲ್ಲಿ ನಡೆದಿದೆ. ಸಚಿವರು ಕುಟುಂಬಸ್ಥರ ಜೊತೆ ಯಲ್ಲಾಪುರ ಚಂದಗುಳಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಬಳಿಕ ಗೋಕರ್ಣದ ಮಹಾಬಲೇಶ್ವರ ದೇಗುಲಕ್ಕೆ ತೆರಳುತ್ತಿದ್ದ ವೇಳೆ ಕಾರು ಪಲ್ಟಿಯಾಗಿದ್ದು. ಸಚಿವರ ಪತ್ನಿ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಸಚಿವ ಆಪ್ತ ಸಹಾಯಕ ಕೂಡಾ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆದಲ್ಲಿ ಸಾವಿಗೀಡಾಗಿದ್ದಾರೆ. ಇನ್ನೂ ಗಂಭೀರವಾಗಿ ಗಾಯಗೊಂಡಿರು ಶ್ರೀಪಾದ ನಾಯ್ಕ ಹಾಗೂ ಇನ್ನೂಳಿದ ಮೂವರನ್ನ ಅಂಕೋಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ, ಮತ್ತೆ ಅಲ್ಲಿಂದ ಗೋವಾಗೆ ರವಾನೆ ಮಾಡಲಾಗಿದೆ.
ಕೇಂದ್ರ ಸಚಿವರು ಯಲ್ಲಾಪುರದಲ್ಲಿ ಸಚಿವ ಶಿವರಾಂ ಹೆಬ್ಬಾರ ಅವರನ್ನ ಭೇಟಿ ಮಾಡಿ ಹೋಗಿದ್ದಾರೆ.