ಮುಕ್ಕಲ್ ಗೊಂದೆ ಜನರಲ್: 28ಗ್ರಾಪಂ ಗಳಲ್ಲಿ 14 ಮಹಿಳಾ ಅಧ್ಯಕ್ಷರೇ ಆಗೋದು..!

ಧಾರವಾಡ: ಜಿಲ್ಲೆಯ ಕಲಘಟಗಿ ತಾಲೂಕಿನ 28 ಗ್ರಾಮ ಪಂಚಾಯತಿಗಳ ಅಧ್ಯಕ್ಷ-ಉಪಾಧ್ಯಕ್ಷ ಮೀಸಲಾತಿ ಪ್ರಕ್ರಿಯೆ ಪಟ್ಟಣದ ಗುಡ್ ನ್ಯೂಸ್ ಕಾಲೇಜಿನಲ್ಲಿ ನಡೆಯಿತು.
ತಾಲೂಕಿನ 28 ಗ್ರಾಮ ಪಂಚಾಯತಿಗಳಿಗೂ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕಾಗಿ ನಡೆದ ಮೀಸಲಾತಿ ಆಯ್ಕೆಯಲ್ಲಿ ಮಿಶ್ರಿಕೋಟಿ ಗ್ರಾಮ ಪಂಚಾಯತಿ ಅಧ್ಯಕ್ಷಗಿರಿಗೆ ಮಹಿಳಾ ಎಸ್ಸಿ, ಉಪಾಧ್ಯಕ್ಷ ಸ್ಥಾನಕ್ಕಾಗಿ ಮಹಿಳಾ ಕೆಟಗೇರಿ ‘ಎ’ ಮೀಸಲಾತಿ ದೊರಕಿದೆ. ಇನ್ನೂ ಮುಂದೆ ಮಿಶ್ರಿಕೋಟಿಯಲ್ಲಿ ಮಹಿಳಾ ಮೆಂಬರಗಳು ಅಧಿಕಾರ ನಡೆಸಲಿದ್ದಾರೆ.
ಗಂಜಿಗಟ್ಟಿ ಗ್ರಾಮ ಪಂಚಾಯತಿಯಲ್ಲೂ ಮಹಿಳಾ ಸದಸ್ಯರೇ ಅಧಿಕಾರ ಪಡೆಯಲಿದ್ದಾರೆ. ಅಧ್ಯಕ್ಷ ಜನರಲ್ ಮಹಿಳೆ, ಉಪಾಧ್ಯಕ್ಷ ಕೆಟಗೇರಿ ‘ಎ’ಮಹಿಳಾ ಮೀಸಲಾತಿ ದೊರೆತಿದೆ.
ಮುಕ್ಕಲ್ ಗ್ರಾಮ ಪಂಚಾಯತಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಎರಡು ಸ್ಥಾನಗಳಿಗೂ ಜನರಲ್ ಮೀಸಲಾತಿ ದೊರಕಿದೆ.