ಎರಡು ವರ್ಷದ ಹಿಂದಿನ ಕೇಸ್ ಟ್ರೇಸ್ಔಟ್: 35 ಲಕ್ಷ ಲೂಟಿ ಮಾಡಿದ್ದ ಕಿರಾತಕರು ಅಂದರ್..
1 min readಹುಬ್ಬಳ್ಳಿ: ಪ್ರಯಾಣಿಕನೊಬ್ಬನ ಜೊತೆ ಗಲಾಟೆ ಮಾಡಿ ಆತನಿಂದ 35 ಲಕ್ಷ ರೂಪಾಯಿ ದೋಚಿ ಪರಾರಿಯಾಗಿದ್ದ ಆರೋಪಿಗಳನ್ನು ಹಿಡಿಯುವಲ್ಲಿ ಹಳೇ ಹುಬ್ಬಳ್ಳಿ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ .
ಮಂಟೂರ ಮಿಲ್ಲತ ನಗರದ ನಿವಾಸಿಯಾದ ದಾದಾಪೀರ್ ನದಾಫ್, ಖಾಜಾ ದುಖಾನದಾರ, ಯಲ್ಲಾಪುರ ಓಣಿಯ ಇಸಾಕ್ ಅಹ್ಮದ್ ಹಾಗೂ ಮಹ್ಮದ ಆಸೀಫ್ ಬಂಧಿತ ಆರೋಪಿಗಳಗಿದ್ದಾರೆ.
2019 ರಲ್ಲಿ ಕಾರವಾರದ ಅಡಿಕೆ ಗೋದಾಮಿನ ನೌಕರ ಅಹ್ಮದ್ ತಮ್ಮ ಮಾಲೀಕ ಹೇಳಿದ ಹಾಗೇ ಹುಬ್ಬಳ್ಳಿಯ ದುರ್ಗದ ಬೈಲಿನ ಬಂಗಾರದ ಅಂಗಡಿಯಲ್ಲಿ 35 ಲಕ್ಷ ಹಣವನ್ನು ಪಡೆದು ತಮ್ಮ ಊರಿಗೆ ಬಸ್ ನಲ್ಲಿ ಪ್ರಯಾಣವನ್ನು ಮಾಡುವಾಗ, ಆರೋಪಿಗಳು ಆತನನ್ನು ಹಿಂಬಾಲಿಸಿ ಬೈ ಪಾಸ್ ಬಳಿಯ ಟೋಲ್ ಪ್ಲಾಜಾ ಬಳಿಯಲ್ಲಿ ಜಗಳ ತೆಗೆದು ಆತನ 35 ಲಕ್ಷ ರೂಪಾಯಿರುವ ಬ್ಯಾಗನ್ನು ದೋಚಿಕೊಂಡು ಹೋಗಿದ್ದರು. ಈ ಸಂಬಂಧ ಹಳೇ ಹುಬ್ಬಳ್ಳಿಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಠಾಣೆಗೆ ಹೊಸದಾಗಿ ಬಂದ ಇನ್ಸಪೆಕ್ಟರ್ ಶಿವಾನಂದ ಕಮತಗಿ ನೇತೃತ್ವದಲ್ಲಿ ತಂಡವೊಂದನ್ನು ರಚನೆ ಮಾಡಿ ಆರೋಪಿಗಳನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಎರಡು ವರ್ಷ ಹಿಂದೆ ನಡೆದ ಪ್ರಕರಣವೊಂದನ್ನ ಬೇಧಿಸುವಲ್ಲಿ ಯಶಸ್ವಿಯಾದ ಪೊಲೀಸರ ಕಾರ್ಯವನ್ನ ಹಿರಿಯ ಅಧಿಕಾರಿಗಳು ಶ್ಲಾಘಿಸಿದ್ದಾರೆ.