BRTS ಸಂಪೂರ್ಣ ಕಳಫೆ, ಸಾಯೋಕೆ ಕರೆಯುವ ರಸ್ತೆಯದು: ಬಿಜೆಪಿ ಶಾಸಕ ಅರವಿಂದ ಬೆಲ್ಲದ ಸ್ಪೋಟಕ ಹೇಳಿಕೆ

ಹುಬ್ಬಳ್ಳಿ: ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಮಹಾತ್ವಾಕಾಂಕ್ಷೆಯ ಹುಬ್ಬಳ್ಳಿ ಧಾರವಾಡ ನಡುವಿನ ಬಿಆರ್ ಟಿಎಸ್ ರಸ್ತೆಯಲ್ಲಿ ಸಾಯೋಕೆ ಬನ್ನಿ ಎಂದು ಜನರನ್ನ ಕರೆಯುವಂತಾಗಿದೆ ಎಂದು ಬಿಜೆಪಿ ಶಾಸಕ ಅರವಿಂದ ಬೆಲ್ಲದ ಸ್ಪೋಟಕ ಹೇಳಿಕೆ ನೀಡಿದ್ದಾರೆ.
ಬಿಆರ್ ಟಿಎಸ್ ಎಷ್ಟೊಂದು ಕಳಫೆ.. ಇಲ್ಲಿದೆ ಕೇಳಿ ಅರವಿಂದ ಬೆಲ್ಲದ ಮಾತು..
ಬಿಆರ್ ಟಿಎಸ್ ಬಗ್ಗೆ ಸಾಕಷ್ಟು ಆತಂಕಕಾರಿ ಮಾಹಿತಿಯನ್ನ ನೀಡಿರುವ ಶಾಸಕ ಅರವಿಂದ ಬೆಲ್ಲದ, ಈ ಡಿಸೈನ್ ಮಾಡಿದವರನ್ನ ಮತ್ತೂ ಇದನ್ನ ಒಪ್ಪಿಕೊಂಡವರನ್ನ ಜೈಲಿಗೆ ಹಾಕಬೇಕು. ಇಷ್ಟೊಂದು ಕೆಳಮಟ್ಟದ ಡಿಸೈನ್ ಎಲ್ಲಿಯೂ ಇಲ್ಲ. ಎಷ್ಟೊಂದು ಕೆಟ್ಟ ಡಿಸೈನ್ ಮಾಡಿಬೇಕು ಎಂಬುದನ್ನ ಇದನ್ನ ನೋಡಿ ಕಲಿಯಬೇಕೆಂದು ಹೇಳಿದರು.
ಬಿಆರ್ ಟಿಎಸ್ ಕಳಫೆ ಕಾಮಗಾರಿಯ ಬಗ್ಗೆ ಎಳೆ ಎಳೆಯಾಗಿ ಬಿಚ್ಚಿಟ್ಟ ಶಾಸಕ ಅರವಿಂದ ಬೆಲ್ಲದ, ನಾನು ಮೊದಲಿನಿಂದಲೂ ಇದು ಕಳಫೆಯಾಗಿದೆ ಎಂದು ಧ್ವನಿಯತ್ತುತ್ತ ಬಂದಿದ್ದೇನೆ. ಯಾವುದೇ ರಾಜಕಾರಣಿಗಳು ಹೇಳಿದರೂ ಅಧಿಕಾರಿಗಳು ಆ ಮಾತುಗಳನ್ನ ಕೇಳುತ್ತಿಲ್ಲ ಎಂದರು.
ಬಿಆರ್ ಟಿಎಸ್ ಹಾಳಾಗುವುದಕ್ಕೆ ಅಧಿಕಾರಿಗಳೇ ಕಾರಣ. ಅವರು ಯಾರೂ ನಮ್ಮ ರಾಜಕಾರಣಿಗಳು ಮಾತು ಕೇಳುತ್ತಿಲ್ಲ ಎನ್ನುತ್ತಲೇ, ಹತ್ತು ಹಲವು ವಿಷಯಗಳನ್ನ ಹೇಳಿದ್ದಾರೆ.