Posts Slider

Karnataka Voice

Latest Kannada News

ನವಲಗುಂದದಲ್ಲಿ ಶಿಕ್ಷಣ ಕ್ರಾಂತಿಯ ಜೊತೆಗೆ ಜಲಜೀವನ ಜಲಧಾರೆ: ಶಾಸಕ ಶಂಕರ ಪಾಟೀಲಮುನೇನಕೊಪ್ಪ

Spread the love

ಧಾರವಾಡ: ಪ್ರತಿಯೊಂದು ವಿದ್ಯಾರ್ಥಿಯು ಉತ್ತಮ ಶಿಕ್ಷಣ ಪಡೆಯಬೇಕೆಂಬ ಮಹದಾಸೆಯಿಂದ ನವಲಗುಂದ ಕ್ಷೇತ್ರದಲ್ಲಿ ಮೂವತ್ತು ಕೋಟಿ ರೂಪಾಯಿ ವೆಚ್ಚದಲ್ಲಿ 200ಕ್ಕೂ ಹೆಚ್ಚು ಕೊಠಡಿಗಳನ್ನ ನಿರ್ಮಾಣ ಮಾಡುವ ಜೊತೆಗೆ ಶಿಕ್ಷಣ ಕ್ರಾಂತಿ ಮಾಡುವ ಹುಮ್ಮಸ್ಸನ್ನ ಇಲ್ಲಿನ ಜನರೇ ನನಗೆ ತುಂಬಿದ್ದಾರೆಂದು ನಗರ ಮೂಲಭೂತ ಸೌಕರ್ಯ ನಿಗಮದ ಅಧ್ಯಕ್ಷ ಹಾಗೂ ನವಲಗುಂದ ಕ್ಷೇತ್ರದ ಶಾಸಕ ಶಂಕರ ಪಾಟೀಲಮುನೇನಕೊಪ್ಪ ಹೇಳಿದರು.

ಮಾತನಾಡಿದ್ದೇನು ಇಲ್ಲಿದೆ ನೋಡಿ..

ತಾಲೂಕಾಡಳಿತದಿಂದ ಆಯೋಜನೆಗೊಂಡಿದ್ದ 71ನೇ ಗಣರಾಜ್ಯೋತ್ಸದಲ್ಲಿ ಮಾತನಾಡಿದ ಶಾಸಕ ಶಂಕರ ಪಾಟೀಲಮುನೇನಕೊಪ್ಪ, ಸರಕಾರಿ ಶಾಲೆಗಳನ್ನ ಅಭಿವೃದ್ಧಿ ಮಾಡುವ ಕನಸು ನನಸಾಗುವ ಸಮಯ ಬಂದಿದೆ. ಇಷ್ಟೊಂದು ದೊಡ್ಡಮಟ್ಟದಲ್ಲಿ ಎಲ್ಲಿಯೂ ಶಾಲೆಗಳ ನಿರ್ಮಾಣ ಆಗುತ್ತಿಲ್ಲ ಎಂದರು.

ಇದರ ಜೊತೆಗೆ ನವಲಗುಂದ ಕ್ಷೇತ್ರದ ಜನರಿಗೆ ಕುಡಿಯುವ ನೀರಿನ ತೊಂದರೆ ನೀಗಿಸಲು ಜಲಜೀವನ ಜಲಧಾರೆಯನ್ನ ತರಲಾಗುತ್ತಿದೆ. ಈ ಮೂಲಕ ಪ್ರತಿ ಗ್ರಾಮಕ್ಕೂ ಕುಡಿಯುವ ನೀರು ತಲುಪಲಿದೆ ಎಂದರು.

ಕೊರೋನಾ ಸಮಯದಲ್ಲಿ ಜನರ ಸಮಸ್ಯೆಗಳಿಗೆ ತಾಲೂಕು ಆಡಳಿತ ನಡೆದುಕೊಂಡ ಬಗ್ಗೆ ಜನರಿಗೆ ಮಾಹಿತಿಯನ್ನ ನೀಡುವ ಜೊತೆಗೆ, ಇಂತಹ ಕೆಟ್ಟ ಸಮಯದಲ್ಲಿ ಸಾಥ್ ನೀಡಿದ ಎಲ್ಲರಿಗೂ ಧನ್ಯವಾದ ತಿಳಿಸಿದರು.

ಕಾರ್ಯಕ್ರಮದಲ್ಲಿ ಇನ್ಸಪೆಕ್ಟರ್ ಚಂದ್ರಶೇಖರ ಮಠಪತಿ ಸೇರಿದಂತೆ ಹಲವರನ್ನ ಸತ್ಕರಿಸಲಾಯಿತು. ಪಟ್ಟಣ ಪಂಚಾಯತಿ ಅಧ್ಯಕ್ಷ ಮಂಜು, ಉಪಾಧ್ಯಕ್ಷ ಖೈರುನಬಿ ನಾಶಿಪುಡಿ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.


Spread the love

Leave a Reply

Your email address will not be published. Required fields are marked *