ಧಾರವಾಡ ಪೊಲೀಸ್ ಟ್ರೇನಿಂಗ್ ಸೆಂಟರಲ್ಲಿ ದುರಂತ..!

ಧಾರವಾಡ: ನಗರದ ಹೊರವಲಯದಲ್ಲಿರುವ ಕಲಘಟಗಿಯ ರಸ್ತೆಯಲ್ಲಿರುವ ಪೊಲೀಸ್ ತರಬೇತಿ ಶಾಲೆಯಲ್ಲಿ ಟ್ರೇನಿ ಪೊಲೀಸ್ ಅಭ್ಯರ್ಥಿಯೋರ್ವ ಕುಸಿದು ಬಿದ್ದ ಪರಿಣಾಮವಾಗಿ ಮುಖಕ್ಕೆ ಗಂಭೀರವಾದ ಗಾಯಗಳಾದ ಘಟನೆ ನಡೆದಿದೆ. ಮನುಕುಮಾರ ಮುನಿರಾಜಪ್ಪ ಎಂಬ 24 ವಯಸ್ಸಿನ ಟ್ರೇನಿ ಅಭ್ಯರ್ಥಿ ಇಂದು ನಡೆಯುತ್ತಿದ್ದ ಪೊಲೀಸ್ ಫಿಸಿಕಲ್ ಪರೀಕ್ಷೆಯಲ್ಲಿ ಕುಸಿದು ಬಿದ್ದ ಪರಿಣಾಮವಾಗಿ ಮುಖಕ್ಕೆ ಗಂಭೀರವಾದ ಗಾಯಗಳಾಗಿವೆ.
EXCLUSIVE VIDEO
https://www.youtube.com/watch?v=XzyO_2CbIRM
ಮೂಲತಃ ಚಿಕ್ಕಬಳ್ಳಾಪುರದವನಾದ ಮನುಕುಮಾರ ಕಳೆದ 8 ತಿಂಗಳಿಂದ ಪೊಲೀಸ್ ತರಬೇತಿ ಟ್ರೇನಿಂಗ್ ಶಾಲೆಯಲ್ಲಿ ತರಬೇತಿ ಪಡೆಯುತ್ತಿದ್ದ ಎಂದು ತಿಳಿದು ಬಂದಿದೆ.
ಇಂದು ಬೆಳಿಗ್ಗೆ ಕೆಲಕಾಲ ಮಾರ್ಚ್ ಫಾಸ್ಟ್ ಮಾಡಿ, ಸರದಿ ಸಾಲಿನಲ್ಲಿ ನಿಂತಾಗ ಸಡನ್ನಾಗಿ ಮುಖ ಹಚ್ಚಿ ಕೆಳಗೆ ಬಿದ್ದ ಪರಿಣಾಮ, ಮುಖಕ್ಕೆ ತೀವ್ರವಾದ ಪೆಟ್ಟಾಗಿದೆ. ತಕ್ಷಣವೇ ಆತನನ್ನ ಸಹಪಾಠಿಗಳು ಮೇಲಕ್ಕೆ ಎತ್ತಿ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.
ಹುಬ್ಬಳ್ಳಿಯ ಕಿಮ್ಸಗೆ ಮನುಕುಮಾರ ಅವರನ್ನ ಚಿಕಿತ್ಸೆಗಾಗಿ ಕರೆತರಲಾಗಿದ್ದು, ಪೇದೆಯ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದೆ.