ತಪ್ಪಿಸಿಕೊಂಡಿದ್ದ ‘ಟೈಗರ್’- ಹುಡುಕಾಡ್ತಿದ್ದ ಇಬ್ಬರು ಪಿಎಸ್ಐ ಸಸ್ಪೆಂಡ್
1 min readಕಲಬುರಗಿ: ಜಿಲ್ಲೆಯ ಚಿಂಚೋಳಿ ಪುರಸಭೆ ಮುಖ್ಯಾಧಿಕಾರಿ ಮೇಲೆ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಯ ಸುಳಿವಿಗಾಗಿ ಯುವಕನೋರ್ವನನ್ನ ವಿಚಾರಣೆಗೊಳಪಡಿಸಿದ್ದ ಇಬ್ಬರು ಪಿಎಸ್ಐಗಳನ್ನ ಅಮಾನತ್ತು ಮಾಡಿ ಆದೇಶ ಹೊರಡಿಸಲಾಗಿದೆ.
ಚಿಂಚೋಳಿ ಠಾಣೆ ಪಿಎಸ್‌ಐ ರಾಜಶೇಖರ ರಾಠೋಡ್ ಮತ್ತು ಸುಲೇಪೇಟ ಠಾಣೆ ಪಿಎಸ್‌ಐ ಚೇತನ ಬಿದಿರಿ ಅವರನ್ನ ಅಮಾನತ್ತು ಮಾಡಲಾಗಿದೆ. ಚಿಂಚೋಳಿ ಪುರಸಭೆ ಮುಖ್ಯಾಧಿಕಾರಿ ಅಭಯ್‌ಕುಮಾದ ಮೇಲೆ ಸದಸ್ಯ ಆನಂದ ಟೈಗರ್ ಎಂಬಾತ ಹಲ್ಲೆ ಮಾಡಿ ಪರಾರಿಯಾಗಿದ್ದ, ಆತನ ಹುಡುಕಾಟಕ್ಕಾಗಿ ತನಿಖೆ ನಡೆಸುತ್ತಿದ್ದ ವೇಳೆಯಲ್ಲಿ ಯುವಕನಿಗೆ ಕಿರುಕುಳ ನೀಡಲಾಗಿದೆ ಎಂಬ ಆರೋಪದಡಿ ಅಮಾನತ್ತು ಮಾಡಲಾಗಿದೆ.
ಟೈಗರ್ ನ ಸಂಪರ್ಕಕ್ಕಾಗಿ ತನಗೆ ವಿನಾಕಾರಣ ಕಿರುಕುಳ ನೀಡಿದ್ದಾರೆಂದು ಸಂಘಟನೆಯೊಂದಕ್ಕೆ ತನಿಖೆಗೊಳಗಾದ ಯುವಕ ದೂರು ನೀಡಿದ್ದ. ನಂತರ ಸಂಘಟನೆಗಳ ಮುಖ್ಯಸ್ಥರು ಯುವಕನಿಗೆ ವಿನಾಕಾರಣ ಕಿರುಕುಳ ಖಂಡಿಸಿ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಇಬ್ಬರು ಪಿಎಸ್ಐಗಳನ್ನ ಅಮಾನತ್ತು ಮಾಡಲಾಗಿದೆ.
ನಕಲಿ ಬಿಲ್‌ಗಳಿಗೆ ಸಹಿ ಹಾಕುವಂತೆ ಅಧಿಕಾರಿ ಮೇಲೆ ಆನಂದ್ ಟೈಗರ್ ಒತ್ತಡ ಹಾಕಿದ್ದ. ಅಕ್ರಮಕ್ಕೆ ಸಾಥ್ ನೀಡದಿದ್ದಕ್ಕೆ ಅಧಿಕಾರಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದ ಟೈಗರ್.