ಮಾವನೊಂದಿಗೆ ಮುನಿಸು- ಪೊಲೀಸನ ಮಡದಿ ನೇಣಿಗೆ ಶರಣು: ಡೆತ್ ನೋಟಲ್ಲಿ ಏನೇನಿದೆ ಗೊತ್ತಾ..?
1 min readಮೈಸೂರು: ತನ್ನ ಮಾವ ಉದ್ದೇಶಪೂರ್ವಕವಾಗಿ ಕಿರುಕುಳ ನೀಡಿದ್ದಾರೆಂಬ ಡೆತ್ ನೋಟ್ ಬರೆದಿಟ್ಟು ಮೂರು ತಿಂಗಳ ಗರ್ಭೀಣಿ ಮಹಿಳೆಯೋರ್ವಳು ನೇಣಿಗೆ ಶರಣಾದ ಘಟನೆ ಮೈಸೂರು ನಗರದ ಹೆಬ್ಬಾಳ ಬಡಾವಣೆಯಲ್ಲಿ ಸಂಭವಿಸಿದೆ. ಚೈತ್ರಾ ಎಂಬ 25 ವರ್ಷದ ಮಹಿಳೆಯೇ ಮನೆಯಲ್ಲಿ ನೇಣಿಗೆ ಶರಣಾಗಿದ್ದು, ಈಕೆಯ ಪತಿಯಾಗಿರುವ ಪೊಲೀಸ್ ಮೋಹನ ಆರಾಧ್ಯಗೆ ಪತ್ರವೊಂದನ್ನ ಬರೆದು ಆತ್ಮಹತ್ಯೆಗೆ ಶರಣಾಗಿದ್ದಾಳೆ.
ಕಳೆದ 5 ತಿಂಗಳ ಹಿಂದೆ ಮೋಹನ್ ಆರಾಧ್ಯನನ್ನು ಮದುವೆಯಾಗಿದ್ದ ಚೈತ್ರಾ, ಇದೀಗ 3 ತಿಂಗಳ ಗರ್ಭಿಣಿಯಾಗಿದ್ದಳು. ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಕಾನ್ ಸ್ಟೇಬಲ್ ಆಗಿರುವ ಮೋಹನ ಆರಾಧ್ಯರ ಪತ್ನಿ, ಮದುವೆಯಾದ ದಿನದಿಂದ ಮಾವ ಸರಿಯಾಗಿ ಮಾತನಾಡಿಸಿಲ್ಲ ಎಂದು ಆರೋಪ ಮಾಡಿದ್ದಾಳೆ.
ನನ್ನ ಜೊತೆಗೆ ತಂದೆ ಹಾಗೂ ತಾಯಿಗೂ ಮಾವನವರಿಂದ ಗೌರವ ಸಿಕ್ಕಿಲ್ಲ. ತವರು ಮನೆಗೆ ಹೋಗುವಾಗ ಕೂಡ ಅವಮಾನ ಮಾಡಿದ್ದಾರೆ. ನಿಮ್ಮ ಅಪ್ಪನೇ ನನಗೆ ಹೀಗೆ ಆಗಲು ಕಾರಣ. ನಿಮ್ಮ ಅಪ್ಪನ ಇಷ್ಟದಂತೆ ಮದುವೆ ಮಾಡಿಕೊಟ್ಟಿಲ್ಲ ಎಂದಿದ್ದರು. ಆದರೆ, ನಮ್ಮ ಮನೆಯವರ ಶಕ್ತಿಯಾನುಸಾರ ಮದುವೆ ಮಾಡಿದ್ದಾರೆ.ನನ್ನ ಈ ಸ್ಥಿತಿಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ನಿಮ್ಮ ತಂದೆಯೇ ಅವರೇ ಕಾರಣ ಎಂದು ಆರೋಪಿಸಿ ಪತ್ರ ಬರೆದು ಚೈತ್ರಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೈಸೂರು ನಗರ ಡಿಸಿಪಿ ಪ್ರಕಾಶ್‌ಗೌಡ ಹೇಳಿಕೆ.
ಪೊಲೀಸಪ್ಪನ ಪತ್ನಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಡಿಸಿಪಿ, ಹೊಟ್ಟೆ ನೋವಿನ ಕಾರಣಕ್ಕೆ ಚೈತ್ರಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆ ಮಾಡಿಕೊಂಡಾಗ ಚೈತ್ರಾ 3 ತಿಂಗಳ ಗರ್ಭಿಣಿ. ಚೈತ್ರಾ ಪತಿ ಮೋಹನ್ ಆರಾಧ್ಯ ನಮ್ಮ ಇಲಾಖೆಯಲ್ಲಿ ಕಾನ್ಸ್‌ಸ್ಟೇಬಲ್ ಆಗಿದ್ದರು. ನಮಗೆ ಯಾವುದೇ ಡೆತ್‌ನೋಟ್ ಸಿಕ್ಕಿಲ್ಲ. ಚೈತ್ರಾ ತಂದೆ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಿದ್ದೇವೆ. ಮದುವೆ ಆಗಿ 5 ತಿಂಗಳು ಆದ ಕಾರಣಕ್ಕೆ ತಹಶೀಲ್ದಾರ್ ಸಮ್ಮುಖದಲ್ಲಿ ಪಂಚನಾಮೆ ಮಾಡಿಸಿದ್ದೇವೆ.