ಬಿಜೆಪಿ ನಾಯಕನಿಗೆ “ಅಲ್ಲಿಯೇ” ಕಚ್ಚಿದ ನಾಯಿ..!

ಮೈಸೂರು: ಶ್ರೀರಾಮಮಂದಿರದ ನಿರ್ಮಾಣ ನಿಧಿಗಾಗಿ ದೇಣಿಗೆ ಸಂಗ್ರಹಿಸುವ ಸಮಯದಲ್ಲಿ ಶ್ವಾನವೊಂದು ಭಾರತೀಯ ಜನತಾ ಪಕ್ಷದ ಮುಖಂಡ ಹಾಗೂ ಚಿತ್ರನಟನಿಗೆ ಕಂಡ ಕಂಡಲ್ಲಿ ಕಡಿದು ಗಾಯಗೊಳಿಸಿದ ಘಟನೆ ಮೈಸೂರಿನ ಜಯಲಕ್ಷ್ಮೀಪುರಂ ಪ್ರದೇಶದಲ್ಲಿ ನಡೆದಿದೆ.
ನಟ, ಬಿಜೆಪಿ ನಾಯಕ ಜಯಪ್ರಕಾಶ್ ಗೌಡ (ಜೆಪಿ)ಗೆ ಗಾಯವಾಗಿದ್ದು, ನಡುವಿನ ಕೆಳಗೆ ಏಳು ಜಾಗದಲ್ಲಿ ಕಡಿದು ಗಾಯಗೊಳಿಸಿದ್ದು, ದೇಹದ ಸೂಕ್ಷ್ಮ ಜಾಗದಲ್ಲೂ ನಾಯಿ ಕಡಿದು ಗಾಯಗೊಳಿಸಿದೆ.
ಪ್ರತಿದಿನವೂ ಮನೆ ಮನೆಗೆ ಹೋಗಿ ದೇಣಿಗೆ ಸಂಗ್ರಹಿಸಲಾಗುತ್ತಿತ್ತು. ಮನೆಯ ಹೊರಗೆ ನಾಯಿ ಇದೆ ಎಚ್ಚರಿಕೆ ಎಂದು ಬೋರ್ಡ್ ಹಾಕದ ಹಿನ್ನೆಲೆಯಲ್ಲಿ ಮನೆಯೊಳಗೆ ಬಿಜೆಪಿ ಮುಖಂಡ ಹೋದಾಗ, ನಾಯಿ ಮೇಲೆರಗಿ ಕಡಿದಿದೆ.
ತಕ್ಷಣವೇ ಮನೆಯವರು ಬಂದು ದೂರ ಸರಿಸುವ ವೇಳೆಗಾಗಲೇ ಜಯಪ್ರಕಾಶ ಗೌಡರಿಗೆ ತೀವ್ರವಾದ ರಕ್ತಸ್ರಾವವಾಗತೊಡಗಿತ್ತು. ತಕ್ಷಣವೇ ಅವರನ್ನ ಆಸ್ಪತ್ರೆಗೆ ತೆಗೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಗಿದ್ದು, ಆರೋಗ್ಯದಲ್ಲಿ ಸಾಕಷ್ಟು ಚೇತರಿಕೆ ಕಂಡು ಬಂದಿದೆ.