ನವನಗರದಲ್ಲೇ ಸರಣಿ ಅಪಘಾತ: ಎರಡ್ ಕಾರ್, ನಾಕ್ ಬೈಕ್ ನಡುವೆ ಘಟನೆ

ಹುಬ್ಬಳ್ಳಿ: ನವನಗರದಲ್ಲಿ ಸರಣಿ ಅಪಘಾತ ನಡೆದಿದ್ದು, ಎರಡು ಕಾರು ಹಾಗೂ ನಾಲ್ಕು ಬೈಕುಗಳು ಜಖಂಗೊಂಡಿದ್ದು ಹಲವರು ಗಾಯಗೊಂಡು, ಹುಬ್ಬಳ್ಳಿಯ ಕಿಮ್ಸ ಸೇರಿದಂತೆ ಹುಬ್ಬಳ್ಳಿಯ ವಿವಿಧ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ದೃವರಾಜ ಮೇಲಗಿರಿ ಎನ್ನುವವರಿಗೆ ಸೇರಿದ ಕಾರೊಂದು ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದಿದ್ದು, ಕಾರು ಬೇರೆ ಬೈಕುಗಳಿಗೆ ಡಿಕ್ಕಿ ಹೊಡೆದಿದೆ. ಆಗ ನಿರಂತರವಾಗಿ ಬೈಕುಗಳು ಕೆಳಗೆ ಬಿದ್ದು, ಸಣ್ಣಪುಟ್ಟ ಗಾಯಗಳಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕಾರಿನ ಮಾಲೀಕ ಧೃವರಾಜ ಮೇಲಗಿರಿ ಎಂಬುವವರಿಗೆ ಗಾಯಗಳಾಗಿದ್ದು, ಕಿಮ್ಸ ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಇನ್ನುಳಿದ ಗಾಯಾಳುಗಳು ಬೇರೆ ಬೇರೆ ಆಸ್ಪತ್ರೆಗೆ ತೆರಳಿದ್ದಾರೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಉತ್ತರ ಸಂಚಾರಿ ಠಾಣೆಯ ಪೊಲೀಸರು, ವಾಹನಗಳನ್ನ ರಸ್ತೆಯಿಂದ ಬೇರೆ ಕಡೆ ಸ್ಥಳಾಂತರ ಮಾಡಿದ್ದು, ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ. ಕಾರಿನ ಡಿಕ್ಕಿಯಿಂದ ಕೆಳಗೆ ಬಿದ್ದ ಬೈಕ್ ಸವಾರರು ಅಲ್ಲಿಂದ ಹೋಗಿದ್ದು, ಅದರ ಬಗ್ಗೆಯೂ ಪೊಲೀಸರು ಮಾಹಿತಿಯನ್ನ ಕಲೆ ಹಾಕುತ್ತಿದ್ದಾರೆ.