ಅಳ್ನಾವರದ ಡೋರಿಯಲ್ಲಿ ಕಬ್ಬಿನ ಲಾರಿ ಹಾಯ್ದು 8ವರ್ಷದ ಬಾಲಕ ಸಾವು..

ಧಾರವಾಡ: ರಸ್ತೆಯನ್ನ ಗಟ್ಟಿ ಮಾಡಿಕೊಳ್ಳಲು ಹಿಂದೆ ಮುಂದೆ ಮಾಡುತ್ತಿದ್ದ ಲಾರಿಯೊಂದು ಬಾಲಕನ ಮೇಲೆ ಹಾಯ್ದ ಪರಿಣಾಮ ಬಾಲಕ ಸ್ಥಳದಲ್ಲಿಯೇ ಸಾವಿಗೀಡಾದ ಘಟನೆ ಧಾರವಾಡ ಜಿಲ್ಲೆಯ ಅಳ್ನಾವರ ತಾಲೂಕಿನ ಡೋರಿ ಗ್ರಾಮದಲ್ಲಿ ಸಂಭವಿಸಿದೆ.
ಧಾರವಾಡದ ಶಿವಾನಂದ ದುರುಗಪ್ಪ ನೀಲನ್ನವರ ಮಾಲಿಕತ್ವದ ಹೊಲದಲ್ಲಿ ಕಬ್ಬು ಹೇರಿಕೊಂಡಿದ್ದ ಲಾರಿಯೊಂದು ಎಂಟು ವರ್ಷದ ಶಾನೂರ ಅಲ್ಲಾಭಕ್ಷ ನದಾಫ ಎಂಬಾತನೇ ಸಾವಿಗೀಡಾದ ಬಾಲಕನಾಗಿದ್ದಾನೆ.
ಲಾರಿ ಚಾಲಕ ಮಂಜುನಾಥ ರಾಯಪ್ಪ ಹರಿಜನ ಎಂಬಾತನೇ, ದುರ್ಘಟನೆಗೆ ಕಾರಣವಾಗಿದ್ದಾನೆ. ಡೋರಿ ಗ್ರಾಮದ ಬಳಿಯಿರುವ ಹೊಲದಲ್ಲಿ ಕಬ್ಬು ಹೇರಿಕೊಂಡು ಹೋಗುವ ಸಮಯದಲ್ಲಿಯೇ ಘಟನೆ ನಡೆದಿದೆ.
ಅಳ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಲಾರಿಯು ಬಾಲಕನ ಮುಖದ ಮೇಲೆ ಹಾಯ್ದ ಪರಿಣಾಮ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾನೆ.