ಇದು ಡಿಜಿಟಿಲ್ ಯುಗಾ ಮರ್ರೇ… ಈ ಮದುವೆ ಕಾರ್ಡನಲ್ಲಿ ಎಲ್ಲವೂ QR ಕೋಡ್..!
1 min readಹುಬ್ಬಳ್ಳಿ: ಮದುವೆ ಎನ್ನೋದು ಪ್ರತಿಯೊಬ್ಬರ ಜೀವನದಲ್ಲಿ ಅವಿಸ್ಮರಣೀಯ ದಿನ. ಆ ದಿನವನ್ನ ಇನ್ನಷ್ಟು ಚೆಂದಗೊಳಿಸುವುದು ಪ್ರತಿಯೊಬ್ಬನ ಬಯಕೆ ಆಗಿರುತ್ತದೆ. ಹಾಗೆ ಮಾಡುವ ಕಲ್ಪನೆ ಅಥವಾ ಸಮಯ ಇರೋದು ಬಹಳ ವಿರಳ. ಆದರೆ, ಇಲ್ಲೋಬ್ಬರು ತಮ್ಮ ಸಪ್ತಪದಿಯ ದಿನವನ್ನ ವಿಭಿನ್ನತೆಯಿಂದ ವಿಶಿಷ್ಠವಾಗಿ ನಡೆಸಲು ಮುಂದಾಗಿದ್ದಾರೆ. ಅದೇನು ವಿಶೇಷ ಅನ್ನೋದನ್ನ ತಿಳಿಯಬೇಕಾದರೇ ಇದನ್ನ ಪೂರ್ತಿಯಾಗಿ ಓದಿ..
ಇವರ ಹೆಸರು ವಿನಾಯಕ. ಶಶಿಕಲಾ ಹಾಗೂ ಗುರುನಾಥ ಪುರುಷಯ್ಯ ನಾಯ್ಕ, ಬಾಲಯ್ಯನವಾಡೆ ಅವರ ಪುತ್ರ. ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮಂಕಿಯವರು. ಇವರೀಗ ಫೆಬ್ರುವರಿ 17ರಂದು ಶಶಿಕಲಾ ಮತ್ತು ಸುರೇಶ ದೇವಿದಾಸ ನಾಯ್ಕ ಹರವಾಸೆಯವರ ಪುತ್ರಿ ಶ್ವೇತಾ ಅವರನ್ನ ವಿವಾಹವಾಗುತ್ತಿದ್ದಾರೆ.
ಈ ಮದುವೆಯ ಕಾರ್ಡಿನಲ್ಲೆ ಅವರು ವಿಶೇಷಗಳನ್ನ ಮಾಡಿದ್ದಾರೆ. ಇವತ್ತಿನ ಡಿಜಿಟಲ್ ಯುಗದಲ್ಲಿ ಎಲ್ಲರ ಹತ್ತಿರ ಮೊಬೈಲ್ ಇರುವುದು ಸರ್ವೇಸಾಮಾನ್ಯವಲ್ಲವೇ..? ಹಾಗಾಗಿಯೇ, ಮದುವೆಯ ಆಮಂತ್ರಣ ಪತ್ರದಲ್ಲಿ ಪ್ರೀ ವೆಡ್ಡಿಂಗ್, ಹಿರಿ-ಕಿರಿ ಕಿರುಚಿತ್ರ (ಹಿರಿಯರನ್ನ ಗೌರವಿಸುವ ಕುರಿತಂತೆ), ಕರುಳಬಳ್ಳಿ ಕಥೆ, ಡಿಜಿಟಲ್ ಇನ್ವಿಟೇಶನ್ ಜೊತೆಗೆ ಫಾಲೋ ಎನ್ನುವ ಮಾರ್ಗಸೂಚಿಯನ್ನ QR CODE ಮೂಲಕ ದಾಖಲಿಸಿದ್ದಾರೆ. ಮೊಬೈಲ್ ಮೂಲಕ ಸ್ಕ್ಯಾನ್ ಮಾಡಿದ್ರೆ ಸಾಕು, ಇವೆಲ್ಲವೂ ನಿಮ್ಮ ಅಂಗೈಯಲ್ಲೇ ಕಾಣತೊಡಗುತ್ತವೆ.
ಲಾಕ್ ಡೌನ್ ನಿಂದ ಮುಂದು ಹೋದ ಮದುವೆ, ಸಿಕ್ಕ ಸಮಯವನ್ನ ವಿನಾಯಕ ಅವರು ಸಮರ್ಪಕವಾಗಿ ಬಳಕೆ ಮಾಡಿಕೊಂಡಿದ್ದಾರೆ.
ವಿನಾಯಕ ನಾಯ್ಕ ಅವರು ಇದಕ್ಕಿಂತಲೂ ಇನ್ನೊಂದು ಮಹತ್ ಕಾರ್ಯವನ್ನ ಮಾಡಲು ಹೊರಟಿದ್ದಾರೆ. ಮದುವೆಗೆ ಮುನ್ನ ಮೂರು ದಿನ, ಅಂದರೆ ಪ್ರೇಮಿಗಳ ದಿನವಾಗಿರೊ ಫೆಬ್ರುವರಿ 14ರಂದು ಹಿರಿಯ ನಾಗರಿಕರಿಗಾಗಿ ವಿಶೇಷ ಕಾರ್ಯಕ್ರಮವನ್ನ ಆಯೋಜನೆ ಮಾಡಿದ್ದಾರೆ. ಹಿರಿಯ ನಾಗಕರಿಗೆ ಸಿಗಬೇಕಾದ ಸೌಲಭ್ಯಗಳನ್ನ ಪಡೆಯಲು ಬೇಕಾದ ದಾಖಲಾತಿಗಳನ್ನ ಉಚಿತವಾಗಿ ಮಾಡಿಕೊಡಲು ಮುಂದಾಗಿದ್ದಾರೆ.
ಇಷ್ಟೆಲ್ಲಾ ವಿಶೇಷ ಇರೊ ಈ ಮದುವೆಗೆ ನಾವೆಲ್ಲಾ ಶುಭ ಹಾರೈಸೋಣ. ಅಂದ ಹಾಗೆ ಇವರು ಉದಯವಾಣಿ ದಿನಪತ್ರಿಕೆಯ ಉಪಸಂಪಾದಕರು. ಇವರಿಗೆ ಆಮಂತ್ರಣ ಪತ್ರಿಕೆ ಸಿದ್ಧಗೊಳಿಸಲು ಸಹಕರಿಸಿದವರಿಗೂ ಕೂಡಾ, ಭೇಷ್ ಎನ್ನಲೇಬೇಕು.