Karnataka Voice

Latest Kannada News

ಮೂವತ್ತು ಸಾವಿರ ಪಡೆದು, ನಿಮ್ಮಕ್ಕಾ ಸತ್ಲು ಅಂದ್ರು: ಹುಬ್ಬಳ್ಳಿಯಲ್ಲಿ ಹೃದಯವಿದ್ರಾವಕ ಘಟನೆ..!

Spread the love

ಹುಬ್ಬಳ್ಳಿ: ಹೃದಯಾಘಾತದಿಂದ ಬಳಲುತ್ತಿದ್ದ ಮಹಿಳೆ ತೀರಿಕೊಂಡಿದ್ದರೂ ಹಣ ಪಡೆದ ಮೇಲೆಯೇ ಖಾಸಗಿ ಆಸ್ಪತ್ರೆಯವರು, ಮನೆಯವರಿಗೆ ತಿಳಿಸಿದ್ದಾರೆಂದು ಮನೆಯವರು ದೂರಿದ ಘಟನೆ ಹುಬ್ಬಳ್ಳಿಯ ದೇಶಪಾಂಡೆನಗರದಲ್ಲಿ ನಡೆದಿದೆ.

ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಘಟಪ್ರಭಾ ಪಟ್ಟಣದ ಸುವರ್ಣ ಕಕ್ಕಯ್ಯಗೋಳ ಎಂಬ ಮಹಿಳೆ ಕೆಲವು ದಿನಗಳ ಹಿಂದೆ ದೇಶಪಾಂಡೆನಗರದಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಹೃದಯ ಸಂಬಂಧಿ ಖಾಯಿಲೆಗಾಗಿ ಸರಕಾರದ ಸ್ಕೀಂನಡಿ ಆಪ್ ರೇಷನ್ ಮಾಡುವುದಾಗಿ ಹೇಳಿದ್ದರು. ಆದರೆ, ನಂತರ 30 ಸಾವಿರ ಹಣವನ್ನ ಕೊಡುವಂತೆ ಕೇಳಿದ್ದರಿಂದ, ನಮ್ಮ ತೊಂದರೆಯನ್ನ ಅವರಿಗೆ ವಿವರಣೆ ಮಾಡಿದ್ದೇವು.

ಆದರೆ, ಮೂವತ್ತು ಸಾವಿರ ರೂಪಾಯಿ ಕೊಡುವ ಮುನ್ನವೇ ನಮ್ಮ ಅಕ್ಕ ಸಾವನ್ನಪ್ಪಿದ್ದಳು. ಆಸ್ಪತ್ರೆಯವರು ಹಣ ಪಡೆದ ಮೇಲೆ ನಿಮ್ಮ ಸಹೋದರಿ ಸಾವಿಗೀಡಾಗಿದ್ದಾಳೆ ಎಂದು ಹೇಳಿದರೆಂದು ಮೃತ ಮಹಿಳೆಯ ಸಹೋದರಿ ಜಯಶ್ರೀ ದೂರಿದ್ದಾರೆ.

ಸುವರ್ಣ ಸಾವಿನಿಂದ ಮನೆಯವರು ಆಕ್ರೋಶವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಉಪನಗರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಗೊಂದಲವಾಗದಂತೆ ಕ್ರಮ ಜರುಗಿಸಿದ್ದಾರೆ.


Spread the love

Leave a Reply

Your email address will not be published. Required fields are marked *