ಧಾರವಾಡ ವಿದ್ಯಾಗಿರಿ BRTS ನಿಲ್ದಾಣದಲ್ಲಿ ನಿಂತ “ಆ” ಬೈಕ್ ಯಾರದ್ದೂ..!
1 min readಧಾರವಾಡ: ಅವಳಿನಗರದ ಕೆಲವು ಆವಾಂತರಗಳಿಗೆ ಕಾರಣವಾದ ಬಿಆರ್ ಟಿಎಸ್ ಎಂಬ ಆನೆಮರಿಯಿಂದ ಜನರು ನೂರೆಂಟು ಸಂಕಷ್ಟಗಳನ್ನ ಎದುರಿಸುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಚಾರವೇ. ಆದರೀಗ, ಅದು ಕೆಲವು ಶ್ರೀಮಂತರಿಗೆ ಬೈಕ್ ಪಾರ್ಕಿಗ್ ಕೂಡಾ ಆಗಿರುವುದು ಬೆಳಕಿಗೆ ಬಂದಿದೆ.
ವಿದ್ಯಾಗಿರಿಯ ಬಿಆರ್ ಟಿಎಸ್ ಬಸ್ ನಿಲ್ದಾಣದಲ್ಲಿ ಟಿಕೆಟ್ ಕೌಂಟರಗೆ ಹೋಗುವ ಜಾಗದಲ್ಲಿಯೇ ನಿಲ್ಲಿಸಿರೋ KA03 HP 4821 ಬೈಕ್ ಎಲ್ಲರಿಗೂ ಅಚ್ಚರಿಯನ್ನ ಮುಡಿಸಿದೆ. ಕಾರಣವೆಂದರೇ, ಆ ಲೈನಿನಲ್ಲಿ ಬೇರೆ ಯಾವುದೆ ಬೈಕ್ ಸವಾರರನ್ನ ಒಳಗಡೆ ಬಿಡುವುದಿಲ್ಲ. ಅಂತಹದರಲ್ಲಿ ಲಕ್ಷಾಂತರ ಬೆಲೆಬಾಳುವ ಬೈಕ್ ಇಲ್ಲಿ ಅರಾಮಾಗಿ, ಪಾರ್ಕಿಂಗ್ ಮಾಡಲಾಗಿದೆ.
ಪ್ರತಿ ಬಸ್ ನಿಲ್ದಾಣದಲ್ಲಿಯೂ ಸಿಸಿಟಿವಿ ಕ್ಯಾಮರಾಯಿಟ್ಟಿರುವ ಬಿಆರ್ ಟಿಎಸ್ ಎಂಬ ಆನೆಮರಿಗೆ ಇದು ಕಾಣದೇ ಹೋಯಿತಾ. ಅಥವಾ ಸೊಂಡಿ ಮೇಲೆ ಮಾಡಿ ನೋಡುವುದರಲ್ಲೇ ಸಮಯ ಕಳಿಯುತ್ತಿದೇಯಾ ಗೊತ್ತಾಗುತ್ತಿಲ್ಲ.
ಅಸಲಿಗೆ ಇದು ಬೆಂಗಳೂರು ಪೂರ್ವ ಪ್ರಾದೇಶಿಕ ಕಚೇರಿಯಲ್ಲಿ ರಿಜಿಸ್ಟರ್ ಆಗಿರೋ ಬೈಕ್. ಮಾಲೀಕರ ಹೆಸರು ಶ್ರೀನಿವಾಸ ಜಿ ಅಂತಾ. ಮಿಸ್ಟರ್ ಆನೆಮರಿಯಂಬ ಬಿಆರ್ ಟಿಎಸ್, ನಿನಗೆ ಏನದ್ರೂ ರೂಲ್ಸ್ ಫಾಲೋ ಮಾಡೋ ಬುದ್ಧಿ ಇದ್ರೇ ಈ ವಾಹನ ನಿಂತಿರೋ ಕಾರಣವನ್ನಾದರೂ ತಿಳಿದುಕೋ.. ಇಲ್ಲದಿದ್ದರೆ, ಹಾಳಾಗಿ ಹೋಗು.. ಎನ್ನುತ್ತಿದ್ದಾರೆ ಪ್ರಜ್ಞಾವಂತ ನಾಗರಿಕರು.