Posts Slider

Karnataka Voice

Latest Kannada News

ಬೈಪಾಸ್ “ಅಡ್ಡ” ರಸ್ತೆಗಳಿಗೆ  ಬ್ರೇಕ್: 12ಜನರ ಸಾವಿನ ನಂತರ ಎಚ್ಚೆತ್ತ ಜಿಲ್ಲಾಡಳಿತ..!

1 min read
Spread the love

ಧಾರವಾಡ: ತಾಲೂಕಿನ ಇಟಿಗಟ್ಟಿ ಗ್ರಾಮದ ಸಮೀಪದ ಬೈಪಾಸ್ ಬಳಿ ನಡೆದಿದ್ದ ಭೀಕರ ರಸ್ತೆ ಅಪಘಾತದಲ್ಲಿ 12 ಜನರು ಸಾವಿಗೀಡಾದ ನಂತರ ಜಿಲ್ಲಾಡಳಿತ ಹಲವು ಕ್ರಮಗಳನ್ನ ತೆಗೆದುಕೊಳ್ಳುತ್ತಿದ್ದು, ಬೈಪಾಸ್ ನ ಅಡ್ಡ ರಸ್ತೆಗಳನ್ನೇಲ್ಲ ಬಂದ್ ಮಾಡಲು ಕ್ರಮವನ್ನ ಜರುಗಿಸಿದ್ದಾರೆ.

ಜನೇವರಿ 15ರಂದು ದಾವಣಗೆರೆಯಿಂದ ಗೋವಾಗೆ ಹೊರಟಿದ್ದ ಟೆಂಪೋವೊಂದು ಟಿಪ್ಪರಗೆ ಡಿಕ್ಕಿ ಹೊಡೆದ ಪರಿಣಾಮ ಪ್ರಕರಣದಲ್ಲಿ 12 ಜನರು ಸಾವಿಗೀಡಾಗಿದ್ದರು. ಘಟನೆ ನಡೆದ ನಂತರ ಹಲವು ಪ್ರತಿಭಟನೆಗಳು ನಡೆದವು. ಇದಾದ ನಂತರ ಸುಪ್ರೀಂಕೋರ್ಟ್ ಕೂಡಾ ಈ ಬಗ್ಗೆ ಸಮಗ್ರವಾದ ಮಾಹಿತಿಯನ್ನ ನೀಡುವಂತೆ ಆದೇಶ ನೀಡಿದೆ. ಫೆಬ್ರುವರಿ 15ರ ಒಳಗೆ ಸರಕಾರ ಈ ಬಗ್ಗೆ ಮಾಹಿತಿಯನ್ನ ನೀಡಬೇಕಾಗಿದೆ.

ಇದೇಲ್ಲದರ ನಡುವೆ ಜಿಲ್ಲಾಡಳಿತ ಬೈಪಾಸ್ ಗೆ ಅಂಟಿಕೊಂಡಿರುವ ಅಡ್ಡ ರಸ್ತೆಗಳನ್ನ ಬಂದ್ ಮಾಡಲಾಗುತ್ತಿದೆ. ಧಾರವಾಡ ಗ್ರಾಮೀಣ ಠಾಣೆಯ ಪೊಲೀಸರ ಉಪಸ್ಥಿತಿಯಲ್ಲಿ ಜೆಸಿಬಿ ಮೂಲಕ ಬಹುತೇಕ ವಾಮ ಮಾರ್ಗಗಳನ್ನ ಬಂದ್ ಮಾಡಲಾಗುತ್ತಿದೆ.

ಈ ಕ್ರಮದಿಂದ ಅನೇಕ ಅವಘಡಗಳು ತಪ್ಪುವುದರಲ್ಲಿ ಯಾವುದೇ ಅನುಮಾನವಿಲ್ಲ. ಧಾರವಾಡದದೊಳಗೆ ಬರಲು ಅಲ್ಲಲ್ಲಿ, ಅಡ್ಡ ರಸ್ತೆಗಳನ್ನ ಮಾಡಿಕೊಂಡಿದ್ದು, ಕೂಡಾ ಹಲವು ಅಪಘಾತಗಳಿಗೆ ಕಾರಣವಾಗಿದ್ದನ್ನ ಇಲ್ಲಿ ಸ್ಮರಿಸಬಹುದು.


Spread the love

Leave a Reply

Your email address will not be published. Required fields are marked *

You may have missed