ಹಾರೋಬೆಳವಡಿ ಪಂಚಾಯತಿಗೆ ಶಶಿಕಲಾ ಅಧ್ಯಕ್ಷೆ, ವೀರೇಶ ಉಪಾಧ್ಯಕ್ಷ..!
1 min readಧಾರವಾಡ: ತಾಲೂಕಿನ ಹಾರೋಬೆಳವಡಿ ಗ್ರಾಮ ಪಂಚಾಯತಿ ಚುನಾವಣೆಯ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಎರಡು ಸ್ಥಾನಗಳಿಗೆ ಚುನಾವಣೆ ನಡೆದು, ಬಿಜೆಪಿ ಬೆಂಬಲಿತ ಸದಸ್ಯರು ಆಯ್ಕೆಯಾಗಿದ್ದಾರೆ.
ಹಾರೋಬೇಳವಡಿ ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷರಾಗಿ ಶಶಿಕಲಾ ಮರೆಪ್ಪ ತಳವಾರ ಮತ್ತು ಉಪಾಧ್ಯಕ್ಷರಾಗಿ ವೀರೇಶ ಬಸಪ್ಪ ಕನಾಜಿ ಆಯ್ಕೆಯಾಗಿದ್ದಾರೆ. ಚುನಾವಣಾಧಿಕಾರಿಯಾಗಿ ರಮೇಶ್ ಜಾಧವ ಕಾರ್ಯನಿರ್ವಹಿಸಿದ್ದರು.
ಚುನಾವಣೆಯ ಸಮಯದಲ್ಲಿ ಸರ್ವ ಸದಸ್ಯರು ಆಗಮಿಸಿ ಪ್ರಕ್ರಿಯೆಯಲ್ಲಿ ಭಾಗವಹಿಸಿ, ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯಲ್ಲಿ ಭಾಗವಹಿಸಿದ್ದರೆಂದು ಪಿಡಿಓ A.H. ಮನಿಯಾರ ತಿಳಿಸಿದರು.
ನೂತನವಾಗಿ ಆಯ್ಕೆಯಾದ ಜನಪ್ರತಿನಿಧಿಗಳು ಮಾಲೆ ಹಾಕುವ ಮೂಲಕ ಶುಭ ಹಾರೈಸಿದರು. ಇನ್ನುಳಿದ ಸದಸ್ಯರು ಹಾಜರಿದ್ದರು.