ರಕ್ಷಾ ರಾಮಯ್ಯ ಯೂಥ್ ಕಾಂಗ್ರೆಸ್ ಯುವರಾಜ…!
1 min readಬೆಂಗಳೂರು: ರಾಜ್ಯ ಯುವ ಕಾಂಗ್ರೆಸ್ ಚುನಾವಣೆಯ ತೀವ್ರ ಹಣಾಹಣಿಯ ನಡುವೆ ಕೊನೆಗೆ ಮೊಹ್ಮದ ನಲಪಾಡ್ ತಿರಸ್ಕೃತಗೊಂಡು, ಕೊನೆಯಲ್ಲಿ ರಕ್ಷಾ ರಾಮಯ್ಯ ಯುವ ಕಾಂಗ್ರೆಸ್ ನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಕೆಲವು ದಿನಗಳ ಹಿಂದೆ ನಡೆದಿದ್ದ ಯುವ ಕಾಂಗ್ರೆಸ್ ಚುನಾವಣೆಯಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದ್ದ ರಾಜ್ಯಾಧ್ಯಕ್ಷ ರಾಗಿ ಆಯ್ಕೆಯಾಗಿರುವ ರಕ್ಷಾ ರಾಮಯ್ಯ 52271 ಮತಗಳನ್ನ ಪಡೆದು ಜಯಗಳಿಸಿದ್ದಾರೆ. ಆದರೆ, 64203 ಮತಗಳನ್ನ ಪಡೆದಿದ್ದ ಮೊಹ್ಮದ ಹ್ಯಾರೀಸ್ ನಲ್ ಪಾಡ್ ಅವರನ್ನ ಫಲಿತಾಂಶದಲ್ಲಿ ತಿರಸ್ಕೃತಗೊಳಿಸಲಾಗಿದೆ.
ಯುವ ಕಾಂಗ್ರೆಸ್ ಚುನಾವಣೆಯಲ್ಲಿ 7 ಜನರು ಸ್ಪರ್ಧೆಗಿದ್ದರು. ಇದರಲ್ಲಿ ಮಿಥುನ ರೈ ಹಾಗೂ ಮೊಹ್ಮದ ನಲಪಾಡ್ ಅವರನ್ನ ಡಿಸ್ ಕ್ವಾಲಿಪೈಡ್ ಮಾಡಲಾಗಿದೆ. ಉಳಿದಂತೆ ಮಹಿಳಾ ಉಪಾಧ್ಯಕ್ಷೆಯಾಗಿ ಭವ್ಯಾ.ಕೆ.ಆರ್ ಆಯ್ಕೆಯಾಗಿದ್ದು, 3156 ಮತಗಳನ್ನ ಪಡೆದಿದ್ದಾರೆ. ಸಂದೀಪ ನಾಯಕ 736 ಮತಗಳನ್ನ ಪಡೆದು ಎಸ್ಸಿ/ಎಸ್ಟಿ ಉಪಾಧ್ಯಕ್ಷರಾಗಿದ್ದಾರೆ.
Foundation of Advanced Management of Elections (FAME) ಇಡೀ ಚುನಾವಣೆಯ ಪ್ರಕ್ರಿಯೆಯನ್ನ ನೋಡಿಕೊಂಡಿತ್ತು. ಆ್ಯಪ್ ಮೂಲಕ ಮೊದಲ ಬಾರಿಗೆ ಮತದಾನ ನಡೆದಿತ್ತು.