ಹು-ಧಾ ಕಮೀಷನರ್ ಇದ್ದಾಗ ಆರ್.ದಿಲೀಪ್ ಲೈಂಗಿಕ ಕಿರುಕುಳ….?
1 min readಬೆಂಗಳೂರು: ಸಿಐಡಿ ಡಿಐಜಿ ದಿಲೀಪ್ ವಿರುದ್ಧ ಪ್ರತಿಷ್ಠಿತ ಸಾರಿಗೆ ಮತ್ತು ಲಾಜಿಸ್ಟಿಕ್ಸ್ ಕಂಪನಿಯ ಮಹಿಳಾ ಉದ್ಯೋಗಿ ಲೈಂಗಿಕ ಕಿರುಕುಳ ಆರೋಪ ಮಾಡಿದ್ದು, ಈ ಸಂಬಂಧ ಮಹಿಳಾ ಉದ್ಯೋಗಿ ಗೃಹ ಇಲಾಖೆಗೆ ದೂರು ನೀಡಿದ್ದು ಪ್ರಕರಣ ಇದೀಗ ಬೆಳಕಿಗೆ ಬಂದಿದೆ.
ಸಿಐಡಿ ಡಿಐಜಿ ಆರ್. ದಿಲೀಪ್, ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತರಾಗಿದ್ದ ಸಂದರ್ಭದಲ್ಲಿ ಮಹಿಳೆ ಪ್ರತಿಷ್ಠಿತ ಸಾರಿಗೆ ಮತ್ತು ಲಾಜೆಸ್ಟಿಕ್ ಸಮೂಹ ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಈ ವೇಳೆ ಕಳೆದ ನವೆಂಬರ್ ಹಾಗೂ ಡಿಸೆಂಬರ್ ನಲ್ಲಿ ಐಟಿ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇನ್ನೋರ್ವ ಸ್ನೇಹಿತೆ ಜೊತೆ ದಿಲೀಪ್ ಅವರನ್ನು ಭೇಟಿಯಾಗಿದ್ದರು. ಈ ವೇಳೆ ಮೊಬೈಲ್ ನಂಬರ್ ಪಡೆದ ದಿಲೀಪ್ ಮಹಿಳೆಗೆ ಕರೆ ಮಾಡಿ ತಮ್ಮನ್ನು ಭೇಟಿಯಾಗಲು ಮನೆಗೆ ಬರುವಂತೆ ಹೇಳಿದ್ದರು.
ಅದರಂತೆ ಸಿಐಡಿ ಡಿಐಜಿ ದಿಲೀಪ್ ರನ್ನು ಅವರ ಮನೆಯಲ್ಲಿ ಭೇಟಿಯಾದ ಮಹಿಳೆ ಜೊತೆ ದಿಲೀಪ್ ಅಸಭ್ಯವಾಗಿ ವರ್ತಿಸಿದ್ದಲ್ಲದೇ ತನ್ನ ಜೊತೆ ಸಂಬಂಧವಿರಿಸಿಕೊಳ್ಳುವಂತೆ ಬಲವಂತ ಮಾಡಿದ್ದರು. ಆದರೆ ಮಹಿಳೆ ತನಗೆ ಈಗಾಗಲೇ ವಿವಾಹವಾಗಿದ್ದಾಗಿ ಹೇಳಿ ಸ್ಥಳದಿಂದ ಹೊರಟು ಬಂದಿದ್ದರು. ಆದರೆ ಅಷ್ಟಕ್ಕೆ ನಿಲ್ಲದ ಡಿಐಜಿ ಕಾಟ ಮತ್ತೆ ಮುಂದುವರೆದಿತ್ತು. ಮಹಿಳೆಗೆ ಅಶ್ಲೀಲ ಸಂದೇಶಗಳನ್ನು ರವಾನಿಸಿ ಕಿರುಕುಳ ನೀಡುತ್ತಿದ್ದರು. ಈ ಬಗ್ಗೆ ಸ್ವತ: ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಅಲ್ಲದೇ ತನ್ನ ವಿರುದ್ಧ ಅಪಪ್ರಚಾರಮಾಡಿ ತನ್ನ ಹೆಸರು ಕೆಡಿಸುತ್ತಿರುವುದಾಗಿಯೂ ಮಹಿಳೆ ದೂರು ನೀಡಿದ್ದಾರೆ.
ಅಷ್ಟೇ ಅಲ್ಲ, ಸಿಐಡಿ ಡಿಐಜಿ ದಿಲೀಪ್ ಮಂಗಳೂರಿನಲ್ಲಿ ಎಸ್ ಪಿಯಾಗಿದ್ದ ವೇಳೆ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ, ಕಾರವಾರದಲ್ಲಿ ಮಹಿಳೆಯೊಂದಿಗೆ ಸಿಕ್ಕಿಬಿದ್ದ ಪ್ರಕರಣ ಸೇರಿದಂತೆ ಹಲವು ಕರ್ಮಕಾಂಡಗಳನ್ನು ಮಹಿಳೆ ದೂರಿನಲ್ಲಿ ಬಯಲಿಗೆಳೆದಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಗೃಹ ಇಲಾಖೆ ಈವರೆಗೂ ಅಧಿಕಾರಿ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನಲಾಗಿದೆ.