“ಪ್ರತಿಷ್ಠಿತ ಪ್ಯಾಮಿಲಿಗಳ ರಗಳೆ- ಹೊಲದಲ್ಲಿ ಬೋಲೆರೋ ಹಾಯಿಸಿದ ಮಹಾನುಭಾವ ‘ಚೆನ್ನಪ್ಪಗೌಡ’- Exclusive Videos
ಆಸ್ತಿ ವಿವಾದದ ಹಿನ್ನೆಲೆ ಅತ್ತಿಗೆಯನ್ನೇ ಕೊಲ್ಲಲು ಯತ್ನ?
ಬೊಲೆರೋ ವಾಹನ ಹತ್ತಿಸಿ ಹತ್ಯೆಗೆ ಯತ್ನಿಸಿದ ಆರೋಪ
ಪ್ರತಿಷ್ಠಿತ ಕುಟುಂಬಗಳು ಹೊರ ಜಗತ್ತಿನಲ್ಲಿ ಮುಖವಾಡ ಹಾಕಿಕೊಂಡು ಹೇಗೆ ಬದುಕುತ್ತಾರೆ ಎಂಬುದಕ್ಕೆ ಇದೊಂದು ನೈಜ ಉದಾಹರಣೆಯಾಗಿದೆ
ಬಾಗಲಕೋಟೆ: ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಅತ್ತಿಗೆಯ ಮೇಲೆ ಬೊಲೆರೋ ವಾಹನ ಹತ್ತಿಸಿ ಹತ್ಯೆಗೆ ಯತ್ನಿಸಿರುವ ಆರೋಪ ಬಾಗಲಕೋಟೆ ಜಿಲ್ಲೆಯ ಇಳಕಲ್ ತಾಲೂಕಿನ ಕಂದಗಲ್ ಗ್ರಾಮದಲ್ಲಿ ಸಂಭವಿಸಿದೆ.
ಗ್ರಾಮದ ಮಂಗಳದೇವಿ ಎಂಬ ಮಹಿಳೆಯ ಮೇಲೆ ಚನ್ನಪ್ಪಗೌಡ ಎಂಬುವವರು ಬೊಲೆರೋ ವಾಹನ ಹತ್ತಿಸಿ ಕೊಲೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ಘಟನೆಯಲ್ಲಿ ಮಹಿಳೆಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಆರು ಎಕರೆ ಜಮೀನಿನ ವಿಚಾರವಾಗಿ ವಿವಾದವಿದ್ದು, ಇದೇ ಹಿನ್ನೆಲೆಯಲ್ಲಿ ಜಮೀನಿನಲ್ಲೇ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ಘಟನೆಗೆ ಸಂಬಂಧಿಸಿದಂತೆ ಇಳಕಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಹೆಚ್ಚಿನ ವಿವರಗಳು ಲಭ್ಯವಾಗಬೇಕಿದೆ.
