Karnataka Voice

Latest Kannada News

ಹುಬ್ಬಳ್ಳಿ: ಮೋಸದಾಟ “ಜಾರ್ಜಿಯಾ ಪ್ಲಾನ್ ರೂಪಿಸಿರೋ ತ್ರಿಮೂರ್ತಿ”ಗಳು- ಇಂದು ದೂರು ದಾಖಲು ಸಾಧ್ಯತೆ…!!!

Spread the love

ಸಿಂಧನೂರಿನ ವ್ಯಕ್ತಿಯಿಂದ ಹಿಡಿದು ಹುಬ್ಬಳ್ಳಿಯ ಹಲವರು ತಮಗಾದ ಅನ್ಯಾಯದ ವಿರುದ್ಧ ಹಿರಿಯ ಅಧಿಕಾರಿಗಳ ಬಳಿ ತೆರಳಲಿದ್ದಾರಂತೆ.

ಹುಬ್ಬಳ್ಳಿ: ಅವಳಿನಗರದ ಸುತ್ತಮುತ್ತಲಿನ‌ ಕೆಲವರನ್ನ ಉತ್ತೇಜಿಸಿ ಬೇರೆ ಬೇರೆ ಸ್ಥಳಗಳಿಗೆ ಕರೆದುಕೊಂಡು ಹೋಗಿ “ಅಂದರ್” ಮಾಡಿ ಕೋಟ್ಯಾಂತರ ರೂಪಾಯಿ ಹೊಡೆಯುವ ಕೆಲವರ ವಿರುದ್ಧ ನೊಂದವರು ದೂರು ನೀಡುವ ಬಗ್ಗೆ ಖಚಿತ ಮಾಹಿತಿ ದೊರೆತಿದೆ.

ವಿಯಟ್ನಾಂನ MOC CHAU ಪ್ರದೇಶದ ಗೋಡೌನವೊಂದರಲ್ಲಿ ಕಾರ್ಪೇಟ್ ಹಾಕಿ, ಒಂದಿಷ್ಟು ಟೇಬಲ್‌ಗಳನ್ನ ಅಳವಡಿಸಿ, ಅಲ್ಲಿಯೇ‌ ಕಲರ್ ಪೇಡ್ ಆದ ಕ್ವಾಯಿನ್‌ಗಳನ್ನ ನೀಡಿ, ವಂಚಿಸಿರುವ ಕುರಿತು ಲಕ್ಷಾಂತರ ರೂಪಾಯಿ ಕಳೆದುಕೊಂಡ ಸಂತ್ರಸ್ಥರು ಸಂಪೂರ್ಣ ವಿವರವನ್ನ ಹೊರ ಹಾಕಲಿದ್ದಾರೆ ಎಂಬುವುದು ಈಗಿರುವ ವಿಚಾರ.

ಇಷ್ಟೇಲ್ಲ ಬೆಳವಣಿಗೆಗಳ ನಡುವೆ “ಜಾರ್ಜಿಯಾ” ಟ್ರಿಪ್ ವ್ಯವಸ್ಥೆ ನಡೆಯುತ್ತಿದೆ. ಮತ್ತದೇ ಹಳೇಯ ಸ್ಕೀಂ. ವಿಮಾನ… ಫೈ ಸ್ಟಾರ್ ಹೊಟೇಲ್… ಪಾರ್ಟಿ… ಸ್ಕ್ವಾಚ್… ಈ ಎಲ್ಲ ಆಸೆ ತೋರಿಸಿ, ಟೊಪ್ಪಿಗೆಯನ್ನ ಮಾತ್ರ ಹಾಕಿ ಕಳಿಸ್ತಾರೆ.

ವಿಯಟ್ನಾಂ ಪ್ರದೇಶದ ವೀಡಿಯೋ ಕೂಡಾ ಕರ್ನಾಟಕವಾಯ್ಸ್.ಕಾಂಗೆ ಲಭಿಸಿದೆ.


Spread the love

Leave a Reply

Your email address will not be published. Required fields are marked *