ಮಾಂಜಾ ದಾರಕ್ಕೆ ಮಹಿಳೆ ಬಲಿ- ಪೊಲೀಸ್ ಕಮೀಷನರ್ “ನೇರಾ ನೇರ” ವಾರ್ನಿಂಗ್… Exclusive Video
ಹುಬ್ಬಳ್ಳಿ: ಯಾರನ್ನೂ ಸುಮ್ಮನೆ ಬಿಡೋದಿಲ್ಲ. ಗಾಳಿಪಟ ಹಾರಿಸುವಾಗ ಮಾಂಜಾ ದಾರ ಬಳಕೆ ಮಾಡಿದರೂ ಕೇಸ್ ಹಾಕಿ ಒಳಗೆ ಹಾಕ್ತೇವಿ. ಯಾರೇ ಇದ್ದರೂ ಬಿಡೋದಿಲ್ಲ ಎಂದು ಪೊಲೀಸ್ ಕಮೀಷನರ್ ಬೋರಸೆ ಭೂಷಣ ಗುಲಾಬರಾವ್ ನೇರವಾಗಿ ಎಚ್ಚರಿಕೆ ನೀಡಿದರು.
ಲ್ಯಾಬ್ ಟೆಕ್ನಿಷಿಯನ್ ವಿದ್ಯಾ ಗೌಡರ ಅವರು ಮಾಂಜಾ ದಾರ ಸಿಲುಕಿ ಸಾವಿಗೀಡಾದ ಹಿನ್ನೆಲೆಯಲ್ಲಿ ಕಿಮ್ಸ್ ಶವಾಗಾರಕ್ಕೆ ಭೇಟಿ ನೀಡಿದ ಸಮಯದಲ್ಲಿ ಕಮೀಷನರ್ ಮಾತನಾಡಿದರು.
ಪೊಲೀಸರು ಬಂಧಿಸಿದ ನಂತರ ವಿದ್ಯಾರ್ಥಿ ಇದ್ದಾನೆ, ಕಾಲೇಜ್ಗೆ ಹೋಗ್ತಾನೆ ಎಂದು ಸಬೂಬು ಹೇಳಿದರೂ ಕೇಳಲ್ಲ ಎಂದ ಅವರು, ಈ ಪ್ರಕರಣದಲ್ಲಿ ಹತ್ತು ವರ್ಷ ಶಿಕ್ಷೆಯಾಗುವ ಥರದ ಕೇಸ್ಗಳನ್ನ ಹಾಕಲಾಗುವುದು ಎಂದರು.
