ಧಾರವಾಡ: ಎಸ್.ಎಸ್.ಕೆಳದಿಮಠ ಅವರಿಗೆ DDPI ಆಗಿ ಇದು ಕೊನೆಯ “ಗಣರಾಜ್ಯೋತ್ಸವ”…!!!
ಧಾರವಾಡ: ಸಾರ್ವಜನಿಕ ಶಾಲಾ ಶಿಕ್ಷಣ ಇಲಾಖೆಯ ಧಾರವಾಡ ಉಪನಿರ್ದೇಶಕರಾದ ಎಸ್.ಎಸ್.ಕೆಳದಿಮಠ ಅವರು ಕೊನೆಯ ಬಾರಿಗೆ ಗಣರಾಜ್ಯೋತ್ಸವ ಆಚರಣೆ ಮಾಡಲಿದ್ದಾರೆ.
ಡಿಡಿಪಿಐ ಆಗಿರುವ ಕೆಳದಿಮಠ ಅವರು ಇದೇ ವರ್ಷದ ಏಪ್ರಿಲ್‌ನಲ್ಲಿ ನಿವೃತ್ತಿಯಾಗಲಿದ್ದಾರೆ. ಹೀಗಾಗಿ ಇಂದು ನಡೆಯುವ ಗಣರಾಜ್ಯೋತ್ಸವ ಕೊನೆಯದಾಗಲಿದೆ.

ಡಿಡಿಪಿಐ ಎಸ್.ಎಸ್.ಕೆಳದಿಮಠ ಅವರ ಅಧಿಕಾರದ ಈ ಸಮಯ ಧಾರವಾಡ ಜಿಲ್ಲೆಯಲ್ಲಿ ಸುವರ್ಣ ಅಕ್ಷರದಲ್ಲಿಡಲು ಯೋಗ್ಯತೆ ಹೊಂದಿದೆ ಎಂಬುದು ಬಹುತೇಕರ ಅಭಿಪ್ರಾಯ.
ಕೆಳದಿಮಠ ಅವರು ಪ್ರತಿ ಕೆಡಿಪಿ ಸಭೆಯಲ್ಲೂ ಸಚಿವರಿಗೆ, ಜಿಲ್ಲಾಧಿಕಾರಿಗೆ ಉತ್ತರ ಕೊಟ್ಟಿರುವುದನ್ನ ಎಲ್ಲರೂ ನೆನಪಿನಲ್ಲಿ ಉಳಿದಿದೆ. ಇವರ ಸೇವೆಯು ಎಷ್ಟೊಂದು ಅಮೋಘವಾಗಿತ್ತು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ.
