ಧಾರವಾಡ-71ಕ್ಷೇತ್ರದಲ್ಲಿ “ತವನಪ್ಪ ಅಷ್ಟಗಿ”ಯವರ ಬ್ಯಾನರ್- “ಶಿವಲೀಲಾ ಕುಲಕರ್ಣಿ” ಅವರ ಭಾವಚಿತ್ರವೇ ಇಲ್ಲ…!!!
ಧಾರವಾಡ: ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಬೃಹತ್ ಕಾರ್ಯಕ್ರಮದ ಮೂಲಕ ಬಡವರಿಗೆ ಮನೆ ವಿತರಣೆ ಮಾಡುತ್ತಿರುವುದರ ಕುರಿತು ಕಾಂಗ್ರೆಸ್ ಮುಖಂಡ ತವನಪ್ಪ ಅಷ್ಟಗಿಯವರ ದೊಡ್ಡ ದೊಡ್ಡ ಧಾರವಾಡ-71 ಕ್ಷೇತ್ರದ ಬಹುತೇಕ ಭಾಗದಲ್ಲಿ ಬ್ಯಾನರ್ ಹಾಕಿರುವುದು ಕಂಡು ಬಂದಿದೆ.
ಧಾರವಾಡ-71 ಕ್ಷೇತ್ರದ ಹಾಲಿ ಶಾಸಕ ವಿನಯ ಕುಲಕರ್ಣಿಯವರ ಧರ್ಮಪತ್ನಿ ಹಾಗೂ ನಿಗಮದ ಅಧ್ಯಕ್ಷೆಯಾಗಿರುವ ಶಿವಲೀಲಾ ಕುಲಕರ್ಣಿಯವರ ಭಾವಚಿತ್ರವನ್ನ ಬ್ಯಾನರ್‌ನಲ್ಲಿ ಹಾಕದೇ ಇರುವುದು ತೀವ್ರ ಸೋಜಿಗ ಮೂಡಿಸಿದೆ.

ತವನಪ ಅಷ್ಟಗಿಯವರ ಭಾವಚಿತ್ರದ ಕೆಳಗಡೆ ಕಾಂಗ್ರೆಸ್ ಮುಖಂಡರು ಧಾರವಾಡ-71 ಮತ ಕ್ಷೇತ್ರ ಎಂದು ಬರೆಯಲಾಗಿದ್ದು, ಆಯಾ ಗ್ರಾಮದ ಗುರು ಹಿರಿಯರು ಸ್ವಾಗತ ಕೋರುವವರು ಎಂದು ನಮೂದು ಮಾಡಲಾಗಿದೆ.
ಬ್ಯಾನರ್‌ನಲ್ಲಿ ಗಮನಿಸಬೇಕಾದ ವಿಷಯವೇನು ಅಂದರೆ, ವಿನಯ ಕುಲಕರ್ಣಿ ಅವರ ಆಪ್ತ ಸಹಾಯಕ ಪ್ರಶಾಂತ ಕೇಕರೆ ಅವರ ಭಾವಚಿತ್ರವನ್ನ ಎರಡನೇಯ ಸಾಲಿನಲ್ಲಿ ಬಳಸಲಾಗಿದ್ದು, ಅಷ್ಟಗಿಯವರ ಮೇಲೆ ಹಸನ್ಮುಖಿಯಾಗಿರುವ ಇಸ್ಮಾಯಿಲ್ ತಮಾಟಗಾರ ಭಾವಚಿತ್ರ ಬಳಸಲಾಗಿದೆ.
ಕಾಂಗ್ರೆಸ್‌ನಲ್ಲಿ ಹೀಗೆಲ್ಲಾ ನಡೆಯುತ್ತಿರುವುದು ಕಾರ್ಯಕರ್ತರಲ್ಲಿ ಗೊಂದಲವನ್ನ ಸೃಷ್ಟಿಸತ್ತಾ ಎಂಬುದನ್ನ ಕಾದು ನೋಡಬೇಕಿದೆ.
