ಅಪಹರಣಕಾರ “ಮುಸ್ಲಿಂ”- ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರಿಗೆ “ಮುಸ್ಲಿಂ ಮಹಿಳೆ” ಏನಂದ್ಲು ಗೊತ್ತಾ…!?
ಧಾರವಾಡ: ನಗರದ ಕಮಲಾಪೂರದ ಸರಕಾರಿ ಶಾಲೆಯಲ್ಲಿ ಮಕ್ಕಳ ಅಪಹರಣ ಮಾಡಿದ ಆರೋಪಿಯ ಕುರಿತು ಧಾರವಾಡ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರಿಗೆ ಮಾತನಾಡಿರುವ ವೀಡಿಯೋ ವೈರಲ್ ಆಗಿದ್ದು, ಸಮಾಜದ ಅಂಕುಡೊಂಕಿಗೆ ತೀಕ್ಷ್ಣ ಪ್ರತಿಕ್ರಿಯೆ ಇದಾಗಿದೆ.
ಹೌದು… ಆರೋಪಿ ಒಂದು ಸಮಾಜದ ವ್ಯಕ್ತಿ ಇರಬಹುದು. ಆದರೆ, ನಾನು ಅದೇ ಸಮಾಜದವಳೇ. ಅವನಿಗೆ ಮಾತ್ರ ಕಠಿಣ ಶಿಕ್ಷೆ ಕೊಡಿ ಎಂದು ನೇರವಾಗಿ ಜಿಲ್ಲಾಧಿಕಾರಿ ದಿವ್ಯ ಪ್ರಭು ಅವರಿಗೆ ಹೇಳಿದ್ದಾರೆ.
ವೀಡಿಯೋ ಇಲ್ಲಿದೆ ನೋಡಿ…
ಅಪಹರಣಕಾರ ಓರ್ವ ಆರೋಪಿ. ಅದಕ್ಕೆ ಆತನ ಸಮಾಜವನ್ನ ತಂದು ನಿಲ್ಲಿಸುವುದು ಒಳ್ಳೆಯದಲ್ಲ. ದುಷ್ಟರು ಯಾರೇ ಇರಲಿ ಅವರಿಗೆ ಕಠಿಣ ಶಿಕ್ಷೆ ಆಗಬೇಕಿದೆ.
ಈ ಘಟನೆ ನಡೆದು ಐದಾರು ದಿನಗಳು ಕಳೆದರೂ ಶಾಲೆಯ ಶಿಕ್ಷಕರಿಗೆ ತಮ್ಮ ತಪ್ಪಿನ ಅರಿವನ್ನ ಮೂಡಿಸುವಲ್ಲಿ ಇಲಾಖೆ ಯಾವುದೇ ಕ್ರಮ ಜರುಗಿಸದೇ ಇರಯವುದು ಸಾರ್ವಜನಿಕ ವಲಯದಲ್ಲಿ ಹಲವು ರೀತಿಯಲ್ಲಿ ಸೋಜಿಗ ಮೂಡಿಸಿದೆ.
