ಕುಂದಗೋಳದಲ್ಲಿ SSLC ವಿದ್ಯಾರ್ಥಿ “ಖಲ್ಲಾಸ್” ಮಾಡಿದ ಹತ್ತನೇ ವರ್ಗದ ವಿದ್ಯಾರ್ಥಿ…!!
ಕುಂದಗೋಳ: ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ನಡುವೆ ಗಲಾಟೆ; ಯುವಕನ ಕೊಲೆ
ಕುಂದಗೋಳ: ಪಟ್ಟಣದ ಸೊಸೈಟಿ ಹಿಂಭಾಗದಲ್ಲಿ ಏಳು ಜನ ಯುವಕರ ನಡುವೆ ನಡೆದ ಮಾತಿನ ಚಕಮಕಿ ಕೊಲೆಯಲ್ಲಿ ಅಂತ್ಯವಾಗಿದೆ. ಪ್ರಜ್ವಲ್ ವಿಘ್ನೇಶ್ವ ಎಂಬ ಯುವಕ ನಡೆಸಿದ ಚಾಕು ಇರಿತದಿಂದಾಗಿ ನಿಂಗರಾಜ ಮಲ್ಲಿಕಾರ್ಜುನ ಅವಾರಿ ಎಂಬಾತ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಘಟನೆಯಲ್ಲಿ ಭಾಗಿಯಾದವರೆಲ್ಲರೂ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳೆಂದು ಶಂಕಿಸಲಾಗಿದ್ದು, ಹಳೆ ವೈಷಮ್ಯ ಅಥವಾ ಕ್ಷುಲ್ಲಕ ಕಾರಣವೇ ಈ ಹತ್ಯೆಗೆ ಪ್ರಚೋದನೆ ನೀಡಿರಬಹುದು ಎಂದು ಅಂದಾಜಿಸಲಾಗಿದೆ. ಕುಂದಗೋಳ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದಾರೆ.
