ಧಾರವಾಡ: ಕಮಲಾಪೂರ ಶಾಲೆಯ ಮಕ್ಕಳ ಅಪಹರಣ- ಶಾಲೆ ಮುಗಿದ ಮೇಲೆ ಶಿಕ್ಷಕರಿಗೆ ಗೊತ್ತಾಯ್ತಾ…!?
ಧಾರವಾಡ: ಕಮಲಾಪೂರದ ಸರಕಾರಿ ಶಾಲೆಯ ಬಳಿಯಿಂದ ಮಕ್ಕಳು ಅಪಹರಣವಾದ ನಂತರವೂ ಶಾಲೆಯಲ್ಲಿನ ಶಿಕ್ಷಕರಿಗೆ ಗೊತ್ತಾಗದೇ ಇರುವುದು ತೀವ್ರ ಸೋಜಿಗ ಮೂಡಿಸತೊಡಗಿದೆ.

ಯಾವುದೇ ಘಟನೆಗಳು ನಡೆದ ತಕ್ಷಣ ಮೊದಲು ಪೊಲೀಸರನ್ನ ಅಮಾನತ್ತು ಮಾಡುವ ವ್ಯವಸ್ಥೆ, ಇಲ್ಲಿ ಸರಕಾರದ ಸಂಬಳ ಪಡೆಯುವ ಶಿಕ್ಷಕರು, ಮುಖ್ಯ ಶಿಕ್ಷಕರು ಏನು ಮಾಡುತ್ತಿದ್ದರು ಎಂಬುದನ್ನ ಅರಿಯಬೇಕಿದೆ.
ಶಾಲೆ ಮುಗಿಯುವವರೆಗೆ ಮಕ್ಕಳು ಇರದೇ ಇರುವ ಕುರಿತು ಹೇಗೆ ಗಮನಕ್ಕೆ ಬರಲಿಲ್ಲ. ಬಿಇಓ ಅವರು ಇಂಥವರ ವಿರುದ್ಧ ಅದ್ಯಾವ ತೆಗೆದುಕೊಳ್ಳುತ್ತಾರೆ ಎಂಬುದನ್ನ ಕಾದು ನೋಡಬೇಕಿದೆ.
