Mlc ಚುನಾವಣೆ: ಬಿಜೆಪಿ ರಾಜ್ಯಾಧ್ಯಕ್ಷರ ಭೇಟಿಯಾದ ವಾರದಲ್ಲೇ “ಪೇಜಾವರ ಶ್ರೀಗಳ” ಆಶೀರ್ವಾದ ಪಡೆದ ‘ಜಯ’ತೀರ್ಥ ಕಟ್ಟಿ…!!!
ಹುಬ್ಬಳ್ಳಿ: ಪದವೀಧರ ಕ್ಷೇತ್ರದ ಚುನಾವಣೆಯ ದಿನಗಳು ಸಮೀಪಿಸುತ್ತಿದ್ದ ಹಾಗೇ ಭಾರತೀಯ ಜನತಾ ಪಕ್ಷದ ರಾಜ್ಯಾಧ್ಯಕ್ಷರ ಜೊತೆ ಮಾತುಕತೆ ನಡೆಸಿದ ವಾರದಲ್ಲೇ ಹಿಂದು ಮುಖಂಡ ಜಯತೀರ್ಥ ಕಟ್ಟಿ ಅವರು ಪೇಜಾವರ ಶ್ರೀಗಳ ಆಶೀರ್ವಾದ ಪಡೆದಿದ್ದಾರೆ.

ಬಿಜೆಪಿ ಉಮೇದುವಾರಿಕೆಯ ಪ್ರಬಲ ಆಕಾಂಕ್ಚಿಯಾಗಿರುವ ಜಯತೀರ್ಥ ಕಟ್ಟಿ ಅವರಿಗೆ ಟಿಕೆಟ್ ಸಿಗುವ ಭರವಸೆ ಹೆಚ್ಚಾಗಿದ್ದು, ಈ ಕುರಿತು ಪ್ರಮುಖರಲ್ಲಿ ಮಾತುಕತೆ ನಡೆದಿದೆ.
ಪಕ್ಷದಲ್ಲಿ ನಿಷ್ಠಾವಂತ ಕಾರ್ಯಕರ್ತರಾಗಿ ಉಳಿದಿರುವ ಜಯತೀರ್ಥ ಕಟ್ಡಿಯವರಿಗೆ ಟಿಕೆಟ್ ಲಭಿಸಿದರೇ ಗೆಲುವು ಕೂಡಾ ನಿಶ್ಚಿತ ಎಂದು ಹೇಳಲಾಗುತ್ತಿದೆ.
