ಹುಬ್ಬಳ್ಳಿ: “ಕಥೆ” ಮುಗಿಸಿ “ಕಥೆ” ಕಟ್ಟಿದ್ದ ಕುಟುಂಬವೀಗ ಪೊಲೀಸರ ಸುಪರ್ಧಿಗೆ…!!!
ಹುಬ್ಬಳ್ಳಿ: ಕಾನೂನು ವಿಶ್ವವಿದ್ಯಾಲಯದ ಸಮೀಪದ ಕಟ್ಟಡವೊಂದರ ಮೇಲಿಂದ ಬಿದ್ದು ವಿಜಯಪುರ ಮೂಲದ ವ್ಯಕ್ತಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಇದು ಆಕಸ್ಮಿಕ ಸಾವಲ್ಲ, ಬದಲಾಗಿ ಕೊಲೆ ಎಂದು ತಿಳಿದುಬಂದಿದೆ. ಈ ಕುರಿತು ಪೊಲೀಸರು ಛತ್ತೀಸ್‌ಗಢ ಮೂಲದ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ವಿಜಯಪುರ ಜಿಲ್ಲೆಯ ಮೂಲದ ವಿಠ್ಠಲ ರಾಥೋಡ್ ಎಂಬುವವರು ಜನವರಿ 10ರ ರಾತ್ರಿ ಕಟ್ಟಡದ ಮೇಲಿಂದ ಬಿದ್ದು ತೀವ್ರ ಗಾಯಗೊಂಡಿದ್ದರು. ಆಸ್ಪತ್ರೆಯ ಎಂಎಲ್‌ಸಿ ವರದಿ ಆಧರಿಸಿ ಸ್ಥಳಕ್ಕೆ ಭೇಟಿ ನೀಡಿದ ಹಿರಿಯ ಪೊಲೀಸ್ ಅಧಿಕಾರಿಗಳು, ಸಾಕ್ಷ್ಯಾಧಾರಗಳನ್ನು ಕಲೆಹಾಕಿ ವಿಚಾರಣೆ ನಡೆಸಿದಾಗ ಕೊಲೆ ಪ್ರಕರಣ ಬೆಳಕಿಗೆ ಬಂದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಛತ್ತೀಸ್‌ಗಢದ ಮೇಘವ್ ಸತನಾಮಿ (50), ಭಗವಾನ್ ದಾಸ್ ಶತನಾಮಿ (21) ಹಾಗೂ ವಿಮಲಾ ಸತನಾಮಿ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದ್ದು, ತನಿಖೆ ಮುಂದುವರಿದಿದೆ.
