Mlc ಚುನಾವಣೆ: ಪೇಜಾವರ ಶ್ರೀಗಳ ಆಶೀರ್ವಾದ ಪಡೆದ ರವೀಂದ್ರನಾಥ ದಂಡಿನ, ಜಯತೀರ್ಥ ಕಟ್ಟಿ…!!!
ಹುಬ್ಬಳ್ಳಿ: ಪೇಜಾವರ ಶ್ರೀಗಳ ದರ್ಶನ ಪಡೆದ ಗಣ್ಯರು; ರವೀಂದ್ರನಾಥ ದಂಡಿನ ಅವರಿಗೆ ಗೌರವ ಸಮರ್ಪಣೆ
ಹುಬ್ಬಳ್ಳಿ: ಇಲ್ಲಿನ ದೇಶಪಾಂಡೆ ನಗರದ ಶ್ರೀಕೃಷ್ಣ ಕಲ್ಯಾಣ ಮಂಟಪಕ್ಕೆ ಆಗಮಿಸಿದ್ದ ಉಡುಪಿ ಪೇಜಾವರ ಅಧೋಕ್ಷಜ ಮಠದ ಪೀಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಅವರನ್ನು ಭಾನುವಾರ ವಿವಿಧ ಗಣ್ಯರು ಭೇಟಿಯಾಗಿ ಆಶೀರ್ವಾದ ಪಡೆದರು.
https://www.instagram.com/reel/DTXedxFEpBr/?igsh=emY0bDB4b2liajQ0
ಈ ಸಂದರ್ಭದಲ್ಲಿ ಪೂಜ್ಯ ಶ್ರೀಗಳು ಭಕ್ತರಿಗೆ ಅನುಗ್ರಹ ಸಂದೇಶ ನೀಡಿ ಆಶೀರ್ವದಿಸಿದರು. ಇದೇ ಶುಭ ಘಳಿಗೆಯಲ್ಲಿ, ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಕನಕದಾಸ ಶಿಕ್ಷಣ ಸಮಿತಿಯ ಅಧ್ಯಕ್ಷ ರವೀಂದ್ರನಾಥ ಬಿ. ದಂಡಿನ ಅವರಿಗೆ ಪೇಜಾವರ ಶ್ರೀಗಳು ಶಾಲು ಹೊದಿಸಿ, ಫಲಪುಷ್ಪ ನೀಡಿ ಗೌರವಿಸಿದರು.
ಪೇಜಾವರ ಶ್ರೀಗಳ ದರ್ಶನ ಪಡೆದ ನಂತರ ಮಾತನಾಡಿದ ಗಣ್ಯರು, ಶ್ರೀಗಳ ಮಾರ್ಗದರ್ಶನ ಮತ್ತು ಆಶೀರ್ವಾದ ಸಮಾಜಕ್ಕೆ ಸದಾ ಪ್ರೇರಣಾದಾಯಕ ಎಂದು ಹರ್ಷ ವ್ಯಕ್ತಪಡಿಸಿದರು.
ಉಪಸ್ಥಿತರಿದ್ದ ಗಣ್ಯರು:
ಈ ಭೇಟಿಯ ಸಂದರ್ಭದಲ್ಲಿ ಭಾಜಪಾ ಮುಖಂಡರಾದ ಜಯತೀರ್ಥ ಕಟ್ಟಿ, ಉಮೇಶ ದುಶಿ, ಗೋಪಾಲರಾವ್ ಕುಲಕರ್ಣಿ, ಎ.ಪಿ. ಐತಾಳ ಸೇರಿದಂತೆ ಅನೇಕ ಭಕ್ತಾದಿಗಳು ಮತ್ತು ಪ್ರಮುಖರು ಉಪಸ್ಥಿತರಿದ್ದರು.
